HomePage_Banner_
HomePage_Banner_
HomePage_Banner_

ಕಲ್ಲೇರಿಯ ಕಾಲನಿಗಳ ಬಡವರಿಗೆ ಅಕ್ಕಿ, ಅಗತ್ಯ ಸಾಮಾಗ್ರಿ ವಿತರಣೆ

ಬೆಳ್ತಂಗಡಿ: ಕೊರೊನಾ ವೈರಸ್ ತಡೆಗಟ್ಟಲು ಲಾಕ್‍ಡೌನ್ ಆದೇಶವಿರುವ ಹಿನ್ನೆಲೆಯಲ್ಲಿ ಜನರು ಅಗತ್ಯ ಸಾಮಾಗ್ರಿಗಳು ಇಲ್ಲದೆ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ರಾಜಕೇಸರಿ ಸಂಘಟನೆಯ ಮಹಿಳಾ ಘಟಕ ಮತ್ತು ತಣ್ಣೀರುಪಂಥ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.


ತಾಲೂಕಿನ ಕಲ್ಲೇರಿಯ ಕಾಲನಿಗಳಲ್ಲಿರುವ ಬಡವರಿಗೆ 50 ಕೆ.ಜಿ. ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಗಳನ್ನು ನೀಡಲಾಯಿತು. ಈ ವೇಳೆ ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ರಾಜಕೇಸರಿ ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಗಣೇಶ್ ಮತ್ತು ರಾಜಕೇಸರಿ ಮಹಿಳಾ ಘಟಕ ಕರಾಯ ಕಾರ್ಯದರ್ಶಿ ಆರತಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.