ಅರಿಪ್ಪಾಡಿ ಮಠದಲ್ಲಿ ಶ್ರೀ ದೇವಿಯ ವಿಗ್ರಹ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಿಪ್ಪಾಡಿ ಮಠ ಉಜಿರೆ ಇದು ಜೀರ್ಣೋದ್ಧಾರಗೊಂಡು ೧೦ ವರ್ಷಗಳಾಗುತ್ತಿದ್ದು ಈ ಸಂದರ್ಭ ಶ್ರೀ ದೇವಿಯ ಗರ್ಭಗುಡಿಗೆ ತಾಮ್ರದ ಹೊದಿಕೆ ಹಾಕುವ ಕೆಲಸ ಪೂರ್ಣಗೊಂಡಿದ್ದು ಶ್ರೀ ದೇವಿಯ ಮೂರ್ತಿಯನ್ನು ಬಾಲಾಲಯದಿಂದ ತಂದು ಗರ್ಭ ಗುಡಿಯೊಳಗೆ ಪ್ರತಿಷ್ಠಾಪಿಸುವ ವೈಧಿಕ ಕಾರ್ಯಕ್ರಮಗಳು ಮಾತ್ರ ಶಾಸ್ತ್ರೋಕ್ತವಾಗಿ ನಡೆದಿದೆ.


ನಿಗದಿಯಂತೆ ಧಾರ್ಮಿಕ ವಿಧಿಗಳನ್ನು ಮಾತ್ರ ಮಠದ ಆವರಣದಲ್ಲಿ ನಡೆಸಲಾಗಿದೆ. ಬಾಲಾಲಯದಿಂದ ಶ್ರೀ ದೇವರನ್ನು ಗರ್ಭಗುಡಿಗೆ ತರುವ ಉದ್ಧೇಶದಿಂದ ವೈಧಿಕರನ್ನು ಮಾತ್ರ ಆಹ್ವಾನಿಸಿ ಅತ್ಯಂತ ಚುಟುಕಾಗಿ ವೈಧಿಕ ಕಾರ್ಯಗಳನ್ನು ಮಾಡಿ ಮುಗಿಸಲಾಗಿದೆ.

ದೀಪ ಪ್ರಜ್ವಲನದ ಮೂಲಕ ಸಭಾಂಗಣದ ಉದ್ಘಾಟನೆ:

ಈ ಹಿಂದೆ ತಿಳಿಸಿರುವಂತೆ ಶುದ್ಧ ಸಸ್ಯಾಹಾರಿ ವ್ಯವಸ್ಥೆಯ, ಮಠದ ಕಟ್ಟುಪಾಡುಗಳನ್ನು ಒಪ್ಪಿಕೊಳ್ಳುವ ಜಾತಿ ಭೇದವಿಲ್ಲದೆ ಎಲ್ಲ ವರ್ಗದ ಜನರ ಶುಭ ಸಮಾರಂಭಗಳಿಗೆ, ಸಂಘ ಸಂಸ್ಥೆಗಳ ವೈವಿದ್ಯಮಯ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣವನ್ನು ಬಳಸುವಂತೆ ಈಗಾಗಲೇ ದೀಪ ಪ್ರಜ್ವಲನದ ಮೂಲಕ ಲೋಕಾರ್ಪಣೆಗೊಳಿಸಲಾಗಿದೆ ಎಂದು ಅರಿಪ್ಪಾಡಿ ಮಠದ ಆಡಳಿತಾಧಿಕಾರಿ ಬಾಲಕೃಷ್ಣ ಅರಿಪ್ಪಾಡಿತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಮುಂದಕ್ಕೆ:
ಪ್ರಾರಂಭದಲ್ಲಿ ಉದ್ಧೇಶಿದ್ದಂತೆ ಮಠದ ವತಿಯಿಂದ ಏ. ೧ ರಿಂದ ೫ ರ ವರೆಗೆ ನಡೆಸಲು ತೀರ್ಮಾನಿಸಿದ್ದ ಧಾರ್ಮಿಕ, ಸಾಂಸ್ಕೃತಿ ಮತ್ತು ಸಾರ್ವಜನಿಕ ಈ ಎಲ್ಲಾ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ.
ಉದ್ದೇಶಿಸಿದಂತೆ ಅರಿಪ್ಪಾಡಿ ಮಠದಲ್ಲಿ ಗಣಯಾಗ, ಚಂಡಿಕಾ ಹವನ, ತ್ರಿಕಾಲ ಪೂಜೆ, ಭೋದನಾಯಜ್ಞ, ಸಾರ್ವಜನಿಕ ಅನ್ನ ಸಂತರ್ಪಣೆ, ಬಾಳೆಕುದ್ರು ಮತ್ತು ಎಡನೀರು ಮಠಾಧೀಶರ ಆಗಮನ, ಪಾದಪೂಜೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ದಂಪತಿ ಆಗಮಿಸಿ ಕಲಾಭವನ ಉದ್ಘಾಟನೆ, ಸನ್ಮಾನ, ಯಕ್ಷಗಾನ, ನಾಟ್ಯ ವೈಭವ ಇತ್ಯಾಧಿ ಕಾರ್ಯಕ್ರಮಗಳು ನಡೆಯಬೇಕಾಗಿತ್ತಾದರೂ ದೇಶದ ಪ್ರಧಾನಿಯವರ ಕರೆಗೆ ಓ ಗೊಟ್ಟು ಲಾಕ್‌ಡೌನ್‌ಗೆ ಬೆಂಬಲಿಸುವ ನಿಟ್ಟಿನಲ್ಲಿ ರಾಷ್ಟ್ರಜಾಗೃತಿಯ ಇರಾದೆಯಿಂದ ಮುಂದೂಡಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.