HomePage_Banner_
HomePage_Banner_
HomePage_Banner_

ನೆರಿಯ ಕೋಲ್ನ ನದಿಗೆ ವಿಷ: ಅಪಾರ ಮೀನುಗಳ ಸಾವು * ನದಿಯ ವಿಷದ ನೀರು ಕುಡಿದು ರಾಷ್ಟ್ರಪಕ್ಷಿ ನವಿಲು ದುರ್ಮರಣ

ಬೆಳ್ತಂಗಡಿ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ನ ನದಿ ಕಿನಾರೆಯಲ್ಲಿ ಕಿಡಿಗೇಡಿಗಳು ನದಿಗೆ ವಿಷ ಹಾಕಿದ್ದರಿಂದ ಹಲವಾರು ಮೀನುಗಳು ಸತ್ತು ಹೋಗಿವೆ. 

ಮಾ.30ರಂದು ರಾತ್ರಿ ಕಿಡಿಗೇಡಿಗಳು ನದಿ ನೀರಿಗೆ ಕೃಷಿಗೆ ಬಳಸುವ ಮೈಲುತುತ್ತು ದ್ರಾವಣವನ್ನು ಹಾಕಿರುವ ಅನುಮಾನ ಸ್ಥಳೀಯರಲ್ಲಿದೆ. ನದಿ ನೀರಿಗೆ ವಿಷ ಬೆರೆಸಿದ್ದರಿಂದ ಸುಮಾರು 2 ಕಿ.ಮೀ. ವ್ಯಾಪ್ತಿಯವರೆಗೆ ಮೀನುಗಳ ಮಾರಣ ಹೋಮ ನಡೆದಿದೆ.


ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿರುವುದರಿಂದ ಮನೆಯಲ್ಲಿದ್ದು ವಿಷ ಪದಾರ್ಥ ಬಳಸಿ ಮೀನು ಹಿಡಿಯುವ ದುಷ್ಕøತ್ಯಕ್ಕೆ ಒಳಗಾಗಿರುವುದು ಅಕ್ಷಮ್ಯವಾಗಿದೆ. ನದಿಯಲ್ಲಿ ಮೀನುಗಳ ಸಂತತಿ ನಶಿಸುವ ಈ ಕಾಲದಲ್ಲಿ ವಿಷ ಬಳಸಿರುವುದು ದುರಂತ

ನದಿ ನೀರು ಕುಡಿದು ನವಿಲು ಸಾವು:
ವಿಷ ಹಾಕಿರುವ ನದಿಯ ನೀರು ಕುಡಿದು ರಾಷ್ಟ್ರಪಕ್ಷಿ ನವಿಲು ಕೂಡ ಈ ಸ್ಥಳದಲ್ಲಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ನದಿಯ ನೀರನ್ನು ಕೃಷಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ಉಪಯೋಗಿಸುತ್ತಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಗ್ರಾಮ ಪಂಚಾಯತ್‍ನಿಂದ ದೂರು ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.