HomePage_Banner_
HomePage_Banner_
HomePage_Banner_

ಕಳಿಯ ಪಂಚಾಯತು ಆಟೋ ಚಾಲಕರಿಗೆ ಗುರುತು ಚೀಟಿ,ಮಾಸ್ಕ್ ವಿತರಣೆ.

ಕಳಿಯ : ಕೊರೊನಾ ಹರಡುವಿಕೆ ತಡೆಯಲು ಮತ್ತು ಸಾರ್ವಜನಿರ ಅಗತ್ಯ ಕೆಲಸಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗೇರುಕಟ್ಟೆಯ ಸುಮಾರು  ಆಟೋ ರಿಕ್ಷಾಗಳಿಗೆ ಪಂಚಾಯತು ವತಿಯಿಂದ ಗುರುತು ಚೀಟಿ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್ ಮಾತನಾಡುತ್ತಾ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಸಲುವಾಗಿ ಹಾಗೂ ಸಾರ್ವಜನಿಕರ ಮನೆಗೆ ಅಗತ್ಯ ಆಹಾರಧಾನ್ಯ,ಸಾಮಾಗ್ರಿಗಳನ್ನು ಸರಬರಾಜು ಮಾಡುವ ಮತ್ತು ಆರೋಗ್ಯದ ದೃಷ್ಟಿಯಿಂದ ಆಟೋ ಚಾಲಕರಿಗೆ ಗುರುತು ಚೀಟಿ ಮತ್ತು ಮಾಸ್ಕ್ ನೀಡಲಾಗುತ್ತದೆ.ಯಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳದೇ ಉತ್ತಮ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸ ಬೇಕು ಎಂದು ಹೇಳಿದರು. ಪಂಚಾಯತು ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಗುರುತು ಚೀಟಿಯನ್ನು ಮತ್ತು ಮಾಸ್ಕ್ ವಿತರಣೆ ಮಾಡಿದರು.ಹಾಗೂ ಕೊರನಾ ವೈರಸ್‌ ತಡೆಗಟ್ಟಲು ಪಂಚಾಯತು ನೊಂದಿಗೆ ಸಹಕರಿಸುವಂತೆ ವಿನಂತಿ ಮಾಡಿದರು.

ಪಂಚಾಯತು ಸದಸ್ಯರಾದ ತುಕಾರಾಮ ಪೂಜಾರಿ, ಸುಧಾಕರ. ಮಜಲು,ದಿವಾಕರ ಎಮ್.ಅಬ್ದುಲ್ ಕರೀಂ ಕೆ.ಎಮ್.ಪಂಚಾಯತು ಕಾರ್ಯದರ್ಶಿ ಕುಂಞ್ಞ, ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನಾಳ, ಕಳಿಯ ಬೀಟ್ ಪೋಲಿಸ್ ಕಾನ್ಸ್‌ಟೇಬಲ್ ಮಹಂತೇಶ್ ಮತ್ತು ಪಂಚಾಯತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.