HomePage_Banner_
HomePage_Banner_
HomePage_Banner_

ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರಿಂದ ವಿಡಿಯೋ ಕಾನ್ಪರೇನ್ಸ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಾರ್ಷಿಕ ಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.೧೦ರಿಂದ ನಡೆಯುವ ವಾರ್ಷಿಕ ಜಾತ್ರೆ ಈ ಭಾರಿ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ಆಗಮಶಾಸ್ತ್ರೋಕ್ತವಾಗಿ ನಡೆಯಿಲಿದೆ.

ದೇವಳದ ತಂತ್ರಿಗಳ ನೇತೃತ್ವದಲ್ಲಿ ಅರ್ಚಕರು ಮತ್ತು ಸೀಮಿತ ನೌಕರರ ಪಾಲ್ಗೊಳ್ಳುವಿಕೆಯಲ್ಲಿ ಜಾತ್ರೆ ನಡೆಯಲಿದ್ದು, ಕೊರೋನಾ ವೈರಸ್ ಸೋಂಕು ಹರಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ಧತ್ತಿ ಇಲಾಖೆಯ ಆದೇಶನುಸಾರ ಎಲ್ಲಿಯೂ ಭಕ್ತರಿಗೆ ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಇತ್ತೀಚೆಗೆ ಶಾಸಕ ಸಂಜೀವ ಮಠಂದೂರು ಅವರ ಕಚೇರಿಯಲ್ಲಿ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಾತ್ರೆಯ ನಿಯಮಗಳ ಕುರಿತು ಚರ್ಚಿಸಿದ ವೇಳೆ ತಂತ್ರಿಯವರು ಆಗಮಶಾಸ್ತ್ರದಲ್ಲಿರುವ ಮಾಹಿತಿಯಂತೆ ಜಾತ್ರೆಯನ್ನು ಸರಳವಾಗಿ ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಾತ್ರೆ ಮಾಡುವುದು ನಿಶ್ಚಯವಾಗಿದೆ. ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ವಸಂತ ಕುಮಾರ್ ಕೆದಿಲಾಯ, ವೆಂಕಟೇಶ್ ಸುಬ್ರಹ್ಮಣ್ಯ ಭಟ್, ದೇವಳದ ಆಡಳಿತಾಧಿಕಾರಿ ಲೋಕೇಶ್ ಸಿ, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಮತ್ತಿತರರು ಉಪಸ್ಥಿರಿದ್ದರು.

ಅತಿವೃಷ್ಟಿ ಮಹಾವಾತಾ ಪ್ರಭೃತಿ ಕ್ಷೋಭಸಂಭವೇ ನಿತ್ಯೋತ್ಸವೋ ನ ಕುರ್ವಿತ |
ನಿತ್ಯಸಂಧ್ಯಾಯ ಏವಂ ಸ್ಯಾತ್ ಗ್ರಾಮೇಷು ನಗರೇಷು ಚ |
ಧರ್ಮನೈಪುಣ್ಯ ಕಾಮಾನಾಂ ಪೂತಿ ಗಂಡೇವ ಸರ್ವಶಃ ||

ಅಭಿಹಿತಾಮಿಹ ನಿಷ್ಕೃತಿಮಾಚರೇತ್ ಅನುದಿತಾಸ್ಯಪಿ ಕರ್ಮವಿಪತ್ತಿಷು
ಸಮನುಚಿಂತ್ಯ ದುರಿಷ್ಟಬಲಾಬಲಂ ತ್ವನುಗುಣಂ ಪ್ರಕೃತೇರ‍್ವಿಕೃತೇ ಪಿ

’ಹೇಳಲ್ಪಡದಿರುವ ಕರ್ಮಗಳ ವಿನಾಶದಲ್ಲಿ ಪ್ರಕೃತಿಯ ಹಾಗೂ ವಿಕೃತಿಯ ಈ ದೋಷಕ್ಕೆ ಇದು ಪ್ರಾಯಶ್ಚಿತ ಎಂದು ಸ್ಥಿರೀಕರಣವೇ ಪ್ರಕೃತಿಯು, ಈ ದೋಷದಲ್ಲಿ ಏನು ಮಾಡಲ್ಪಡಬೇಕು ಎನ್ನುವ ವಿಚಾರವು ವಿಕೃತಿಯು. ಈ ಎರಡಲ್ಲಿಯೂ ದೋಷದ ತಾರತಮ್ಯವನ್ನು, ಯುಕ್ತಿಯನ್ನು ಬಲ್ಲ ಆಚಾರ್ಯರೊಡನೆ ಸಮಾಲೋಚಿಸಿ ಅದಕ್ಕನುಗುಣವಾದ ಪ್ರಾಯಶ್ಚಿತವನ್ನು ಆಚರಿಸಬೇಕು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.