ಅಗತ್ಯ ವಸ್ತುವಿಗೆಂದು ಅನಗತ್ಯವಾಗಿ ಮನೆಯಿಂದ ಹೊರಬಂದ ಜನ!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೇಂದ್ರ ಮತ್ತು ರಾಜ್ಯ ಸರಕಾರ ಎ. 14 ರ ವರೆಗೆ ದೇಶಾಧ್ಯಂತ ಲಾಕ್ ಡೌನ್ ಘೋಶಿಸಿದ್ದರ ಮಧ್ಯೆ ಮಾ. 27 ರಂದು ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿದ್ದುದರಿಂದ 3 ದಿನಗಳ ಕಾಲ ಜಿಲ್ಲೆಯ ಮಟ್ಟಿಗೆ ಸಂಪೂರ್ಣ ಬಂದ್ ಆಚರಿಸಿ ಇಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಬೆನ್ನಿಗೇ ಜನ ಪೇಟೆ ಪಟ್ಟಣಗಳಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಅಗತ್ಯ ವಸ್ತುಗಳಿಗಾಗಿ ಮಿಗಿಬಿದ್ದ ದೃಷ್ಯಗಳನ್ನು ಕಾಣಲು ಸಾಧ್ಯವಾಯಿತು.

ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಮಾಧ್ಯಮ ಗೋಷ್ಠಿ ನಡೆಸಿ, ಮಂಗಳವಾರ ಜನ ಅಗತ್ಯ ವಸ್ತುಗಳಿಗಾಗಿ ಮನೆಯಿಂದ ಯಾರಾದರೂ ಓರ್ವ ಆರೋಗ್ಯವಂತ ವ್ಯಕ್ತಿ ತೀರಾ ಅಗತ್ಯವಿದ್ದ ಪಕ್ಷದಲ್ಲಿ ಪೇಟೆಗೆ ಬಂದು ಅಂದು ತೆರೆದಿರುವ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಎಂದು ಸೂಚನೆ ನೀಡಿದ್ದರು.

ಆದರೆ ಇಂದು ಬೆಳಿಗ್ಗೆ ಪೇಟೆ ಪಟ್ಟಣಗಳಲ್ಲಿ ನೋಡಿದರೆ ಅದಕ್ಕೆ ಸಂಪೂರ್ಣ ವ್ಯತಿರಿಕ್ತ ವಾತಾವರಣ ಕಂಡುಬಂತು.
ನಗರದ ಮಾರುಕಟ್ಟೆ, ಉಜಿರೆ ಪೇಟೆ ಮತ್ತು ಮಾರುಕಟ್ಟೆ, ಬೆಳ್ತಂಗಡಿ ಸಂತೆಕಟ್ಟೆ, ಗುರುವಾಯನಕೆರೆ ಪೇಟೆ, ಮದ್ದಡ್ಕ, ಸೋಮಂತಡ್ಕ ಪೇಟೆ, ಕಕ್ಕಿಂಜೆ ಪೇಟೆ ಸೇರಿದಂತೆ ತಾಲೂಕಿನ ಪ್ರಮುಖ ನಗರಗಳಲ್ಲೆಲ್ಲಾ ಜನ ಎಂದಿಗಿಂತ ಜಾಸ್ತಿಯೇ ಎಂಬಂತೆ ಖರೀದಿಗೆ ಜಮಾವಣೆಗೊಂಡಿದ್ದಾರೆ. ಔಷಧಿ ಅಂಗಡಿಗಳು ದಿನ ತೆರೆದೇ ಇರುತ್ತದೆಯಾದರೂ ಒಂದು ಮಾತ್ರ ಒಮ್ಮೆಲೇ ನೂರಾರು ಜನ ಔಷಧಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಖರೀದಿಗೆ ಮುಂದಾಗಿದ್ದರು.
ಪೇಟೆ ಪಟ್ಟಣಗಳಿಗೆ ಬರುವ ಜನ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ಇದ್ದಾಗ್ಯೂ ಜನ ನಿಯಮ ಮೀರಿ ವರ್ತಿಸುತ್ತಿದ್ದ ದೃಷ್ಯಗಳು ಎಲ್ಲೆಡ್ ಕಂಡು ಬಂದವು.

ಪೊಲೀಸರು, ಪಟ್ಟಣ ಪಂಚಾಯತ್, ಅಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿಗಳು, ಆಯಾಯಾ ಗ್ರಾಮಗಳಲ್ಲಿ ರಚನೆಯಾಗಿರುವ ಗ್ರಾಮ ಮಟ್ಟದ ಕಾರ್ಯಪಡೆಯ ಅಧ್ಯಕ್ಷರು, ಸದಸ್ಯರುಗಳು, ಪಿಡಿಒ ಮತ್ತು ಅಧಿಕಾರಿಗಳು ಜನರನ್ನು ನಿಯಂತ್ರಿಸಲು ಮಾರ್ಗದರ್ಶನ ನೀಡುತ್ತಿದ್ದರು. ಅಂಗಡಿ ಮುಂಗಟ್ಟುಗಳ ಎದುರು ಮೀಟರ್ ಗಳ ಅಂತರದಲ್ಲಿ ಸುಣ್ಣದಿಂದ ಮಾರ್ಕ್‌ಗಳನ್ನು ಮಾಡಲಾಗಿದ್ದು ಕೆಲವೆಡೆ ಜನ ಶಿಸ್ತು ಪಾಲಿಸುತ್ತಿದ್ದರು. ಪೊಲೀಸ್ ವಾಹನ, ನಗರ ಪಂಚಾಯತ್ ವಾಹನ, ತಹಶೀಲ್ದಾರರ ವಾಹನ, ಪಂಚಾಯತ್‌ಗಳ ಘನ ತ್ಯಾಜ್ಯ ವಾಹನಗಳಲ್ಲಿ ಇರುವ ಧ್ವನಿ ವರ್ಧಕದ ಮೂಲಕ ಅಧಿಕಾರಿಗಳು ಎನೌನ್ಸ್‌ಮೆಂಟ್ ಮಾಡುತ್ತಾ ಜನರನ್ನು ಎಚ್ಚರಿಸುತ್ತಿದ್ದಾರೆ.

 ಜಿ.ಕೆ ಬಜಾರ್ ಬೆಳ್ತಂಗಡಿ

ಗುರುವಾಯನಕೆರೆ ಪೇಟೆ

ಗುರುವಾಯನಕೆರೆ ಮೆಡಿಕಲ್

 

ಬೆಳ್ತಂಗಡಿ ಸಂತೆ ಮಾರುಕಟ್ಟೆ

ಉಜಿರೆ ಪೇಟೆ

ಮಡಂತ್ಯಾರು ಎಸ್.ಬಿ.ಐ‌ ಎಟಿಮ್

ಉಜಿರೆ ಪ್ರಭಾತ್ ಸ್ಟೋರ್

ಉಜಿರೆ ಕೃಷ್ಣ ಟ್ರೇಡರ್ಸ್

ಉಜಿರೆ ಸತ್ಕಾರ್ ಟ್ರೇಡರ್ಸ್

ಅಳದಂಗಡಿ

ನಾರಾವಿ ಪೇಟೆ

 ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ವಾಹನಗಳ ಸಾಲು

ಸಾಮಾಜಿಕ ಅಂತರ ಇಲ್ಲದೆ ನಾರಾವಿಯಲ್ಲಿ ಜನ ಖರೀದಿಯಲ್ಲಿ

ಮಡಂತ್ಯಾರಿನಲ್ಲಿ‌ ಮುಂಜಾಗ್ರತಾ ಕ್ರಮ

ನಾರಾವಿಯಲ್ಲಿ ಪಡಿತರ ವ್ಯವಸ್ಥೆ

ಮಡಂತ್ಯಾರು ಪೇಟೆ

ಚಿಕಿತ್ಸಾ ಫಾರ್ಮ್ ಬೆಳ್ತಂಗಡಿ

ಅಣಿಯೂರು ಪೇಟೆ

 ಬೆಳ್ತಂಗಡಿ  ಮಾರುಕಟ್ಟೆ ಒಳಾಂಗಣ

 

ಧಮ೯ಸ್ಥಳ ಸೇವಾ ಸಹಕಾರಿ ಸಂಘದ ಕಟ್ಟಡದ ದಿನಸಿ ಅಂಗಡಿ

ಬೆಳ್ತಂಗಡಿ ‌ಹಳೆಕೋಟೆ ಪೆಟ್ರೋಲ್ ಪಂಪ್

ಉಜಿರೆ ಬೆಳಾಲು ಕ್ರಾಸ್ ಮೆಡಿಕಲ್ ಶಾಫ್

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.