ನಾಳೆ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಒಬ್ಬರಿಗೆ ಮಾತ್ರ ಅವಕಾಶ * ಜಿಲ್ಲಾಡಳಿತ ದಿಂದ ಕಟ್ಟುನಿಟ್ಟಿನ ಆದೇಶ

Advt_NewsUnder_1
Advt_NewsUnder_1
Advt_NewsUnder_1

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮಾ.31ರಂದು ಜನತೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆಯ ತನಕ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಜನತೆ ಇಲಾಖೆಯ ನಿರ್ಧಾರವನ್ನು ಗೌರವಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಖರೀದಿಸಬೇಕಾಗಿದೆ. ಒಂದು ಮನೆಯಿಂದ ಒಬ್ಬರು ಮಾತ್ರವೇ ಖರೀದಿಗೆ ಬರಬೇಕೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿದೆ. ಜನತೆ ಯಾವುದೇ ಕಾರಣಕ್ಕೂ ಆದೇಶವನ್ನು ತಪ್ಪುವಂತಿಲ್ಲ. ಒಂದೊಮ್ಮೆ ಆದೇಶ ಧಿಕ್ಕರಿಸಿದ್ದಲ್ಲಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಗಡೆ ಬರದಂತೆ ಖಡಕ್ ವಾರ್ನಿಂಗ್ ನೀಡಲಾಗಿದೆ.

ಮಂಗಳವಾರದಂದು ದ.ಕ. ಜಿಲ್ಲೆಯಲ್ಲಿ ಏನೇನು ಲಭ್ಯ?
ದಿನಸಿ ಸಾಮಾಗ್ರಿಗಳು
ಹಾಲು, ಮೊಸರು
ಮೀನು, ಮಾಂಸ
ತರಕಾರಿ ಸಾಮಾಗ್ರಿಗಳು
ಮೆಡಿಕಲ್ ಸೌಲಭ್ಯ
ವೈದ್ಯಕೀಯ ಸೇವೆ
ಪೆಟ್ರೋಲ್, ಡೀಸೆಲ್
ದಿನ ಬಳಕೆ ವಸ್ತುಗಳು ಲಭ್ಯ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.