ಸೋಂಕನ್ನು ದೇಶದಿಂದ ಹೊರದೂಡಲು ನಾವೆಲ್ಲರೂ ಕಟಿಬದ್ದರಾಗೋಣ ಮುಂದಿನ ಜನಾಂಗಕ್ಕೆ ನಾವು ರಕ್ಷಣೆ ನೀಡೋಣ.ಡಾ.ಡಿ.ವೀರೇಂದ್ರ ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವ್ಯಾಧಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಯಾಕೆಂದರೆ ಮನುಷ್ಯ ಜನಾಂಗಕ್ಕೆ ಬರುವ ಸೋಂಕುರೋಗವಾಗಿದೆ. ಈ ಹಿಂದೆ ಪ್ರಪಂಚದಲ್ಲಿ ಅನೇಕ ಬಾರಿ ಪ್ಲೇಗ್ ಸೇರಿದಂತೆ ಅನೇಕ ವ್ಯಾಧಿಗಳು ಸಾವಿರಾರು ಜನರನ್ನು ಸಾವಿರಾರು ಸಂಖ್ಯೆಯಲ್ಲಿ ಕೊಂಡುಹೋಗಿದೆ. ಪ್ಲೇಗ್ ರೋಗ ಬಂದಾಗ ಪರ್ಯಾಯ ಔಷಧಿ ವೈದ್ಯಕೀಯ ಸೌಲಭ್ಯ‘ ಮತ್ತು ಮಾಹಿತಿ ಇರಲಿಲ್ಲ. ರೋಗದಿಂದ ಎಷ್ಟುಮಂದಿ ಸತ್ತರೂ, ಎಷ್ಟು ಮಂದಿ ನರಳಿದರೂ ಎಂಬ ಪೂರ್ಣ ಮಾಹಿತಿ ಇರಲಿಲ್ಲ. ಇವತ್ತು ಮಾಧ್ಯಮಗಳ ಸಹಾಯದಿಂದ ವಿಶ್ವದಲ್ಲಿ ಜಾಗೃತಿ ಉಂಟಾಗಿದೆ.

ಕಲಿಯುಗ ಕೆಟ್ಟದು ಎನ್ನುತ್ತಾರೆ, ಆದರೆ ಕಲಿಯುಗದಲ್ಲಿ ಮಾತ್ರ ಕಾಯಿಲೆಗಳು ಬಂದಾಗ, ವಿಪತ್ತುಗಳು ಬಂದಾಗ ರಕ್ಷಣೆಗೆ ಇಂದು ಅವಕಾಶವಿದೆ. ಕೊರೊನಾ ವ್ಯಾದಿ ಕೂಡ ಇದೇ ರೀತಿಯದ್ದು. ಎಲ್ಲಿ ಹುಟ್ಟಿದ್ದು ಎಲ್ಲಿ ಬೆಳೆಯಿತು ಎಂಬುದಕ್ಕಿಂತ ನಮ್ಮ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ.

ಕೊರೊನಾ ಕಾಯಿಲೆಯಿಂದ ಸಾವು ಬರುವುದು ಎಂಬುದು ನಿಶ್ಚಯ ಆದರೆ ಅದಕ್ಕೆ ಬೇಕಾದ ಔಷಧ ಕಂಡುಹಿಡಿಯಲು ಯಾರಿಗೂ ಸಾಧ್ಯವಾಗಿಲ್ಲ. ಅದಕ್ಕಾಗಿ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸೋಣ. ಅದಕ್ಕಿಂತಲೂ ಮುಖ್ಯವಾಗಿ ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ಒಳ್ಳೆಯ ಸಂದೇಶದ ಜತೆಗೆ ಕಠಿಣವಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ದೇಶವನ್ನು ಲಾಕ್‌ಡೌನ್ ಮಾಡುವುದು ಎಂದರೆ ಪ್ರಧಾನಿಯಾದವರಿಗೆ ಅದಕ್ಕಿಂತ ದೊಡ್ಡ ಸವಾಲು ಇರಲಿಕ್ಕಿಲ್ಲ. ಅವರು ಸವಾಲನ್ನು ಎದುರಿಸಿ ಎಲ್ಲರೂ ಕಡ್ಡಾಯವಾಗಿ ಲಾಕ್‌ಡೌನ್ ಮಾಡಿಕೊಂಡು ಮನೆಯಲ್ಲೇ ಉಳಿಯಿರಿ ಎಂಬ ಸಂದೇಶ ಕೊಟ್ಟಿದ್ದಾರೆ.

 

ಶೇಕಡಾ 99. ಮಂದಿ ಪ್ರಧಾನಿ‌‌ ಆಜ್ಞೆ ಪಾಲಿಸಿರುವಾಗ 1 ಶೇಕಡಾ ಪರಿಗಣಿಸಬೇಕಿಲ್ಲ;

ಶೇ.99 ಮಂದಿ ಪ್ರಧಾನಿಯವರ ಆಜ್ಞೆಯಯನ್ನು ಒಪ್ಪಿಕೊಂಡು ಮನೆಯಲ್ಲೇ ಉಳಿದಿದ್ದಾರೆ. ಶೇ.1ರಷ್ಟು ಅವಿವೇಕಿಗಳನ್ನು ಬದಿಗೊತ್ತಿ ಆಲೋಚಿಸಿದರೆ ಶೇ.99 ಮಂದಿ ವಿಧೇಯರಾಗಿ, ಸತ್ಪ್ರಜೆಗಳಾಗಿ ಸತ್ ಸಂಪ್ರದಾಯವನ್ನು ಮೆರೆದಿದ್ದಾರೆ ಎಂಬುದೇ ಹರ್ಷಕರ.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಎಷ್ಟು ಮಂದಿ ಭೇಟಿ ನೀಡುತ್ತಾರೆ ನಿಮಗೆಲ್ಲ ತಿಳಿದಿದೆ. ಕಳೆದ ಒಂದು ವಾರದಿಂದ ಒಬ್ಬ ವ್ಯಕ್ತಿಯೂ ದೇವರ ದರ್ಶನಕ್ಕೆ ಬರಲಿಲ್ಲ. ಬರಲಿಲ್ಲ ಎಂಬುದು ಮುಖ್ಯವಲ್ಲ, ಆದರೆ ಈ ಶಿಸ್ತನ್ನು ಯಾರೆಲ್ಲ ಪಾಲಿಸಿದ್ದೀರಿ ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ.

ಈ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಬರಬೇಡಿ, ನೀವೆಲ್ಲರೂ ಮನೆಯೊಳಗಿರಿ ನಿಮ್ಮ ಆಹಾರ ವಿಚಾರ ವ್ಯವಹಾರವನ್ನು ಮನೆಯಲ್ಲೇ ನಿಭಾಯಿಸಿ. ಕುಟುಂಬದೊಂದಿಗೆ ಸಮಯ ಕಳೆಯಲು ಇದೊಂದು ಉತ್ತಮ ಅವಕಾಶ. ಮಧ್ಯಮ ವರ್ಗ ಶ್ರೀಸಾಮಾನ್ಯರು ಮಕ್ಕಳನ್ನು ಹತೋಟಿಗೆ ತರುವುದು ಕಷ್ಟ, ಆದರೆ ಈ ಸಮಯದಲ್ಲಿ ಮಕ್ಕಳಿಗೆ ಪ್ರಜ್ಞೆ ಮೂಡಿಸಿ ಜಾಗೃತಿ ಮೂಡಿಸಿ. ಈ ಸೋಂಕು ರೋಗದಿಂದ ಬಚಾವಾದರೆ ದಿನಗಳಲ್ಲಿ ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬಹುದು.
ಎಲ್ಲರೂ ಸಂಯಮ ಪಾಲಿಸಿ ಎಚ್ಚರಿಕೆಯಿಂದ ಇದ್ದು, ಸಾರ್ವಜನಿಕ ಪ್ರದೇಶದಿಂದ ಹಾಲು, ಅಗತ್ಯ ವಸ್ತು ಖರೀದಿಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ಯೋಗಾಭ್ಯಾಸ ಬೆಳೆಸಿಕೊಳ್ಳಿ;

ನೀವು ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಸಂದರ್ಭ ಯೋಗ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಾನೂ ದಿನಾ ಯೋಗಾಸನ ಮಾಡುತ್ತಿದ್ದೇನೆ. ಹಿಂದೂಗಳಲ್ಲಿ ದೇವರ ಪೂಜೆ ಮಾಡುತ್ತಿರಿ . ಗಂಡಸರು ಬೆಳಗ್ಗೆ 6ರಿಂದ 11ರವರೆಗೆ ಸೂರ್ಯನಮಸ್ಕಾರ ಅಥವಾ ದೀರ್ಘದಂಡ ನಮಸ್ಕಾರ ಮಾಡಬೇಕು. ಮಹಿಳೆಯರು ಅಡ್ಡಬಿದ್ದು ನಮಸ್ಕಾರ ಮಾಡುವುದರಿಂದ ಉಸಿರಾಟ ತೊಂದರೆ, ರಕ್ತ ಸಂಚಾರ ಸಮಸ್ಯೆ ನಿವಾರಣೆಯಾಗಿ ದೇಹ ಸಮತೋಲ ಕಾಯ್ದುಕೊಳ್ಳುತ್ತದೆ. ಹೊಟೇಲ್ ವ್ಯವಸ್ಥೆ ಇಲ್ಲವಾದ್ದರಿಂದ ಮನೆ ಆಹಾರ ಅತಿಯಾದ ಬಳಕೆ ಮಾಡದೆ ಮಿತವಾದ ಆಹಾರ ಸೇವನೆ ಇರಲಿ.
ಎಂದರು.

ಖಂಡಿತವಾಗಿಯೂ ಕೊರೊನಾ ಸೋಂಕು ನಿವಾರಣೆಯಾಗಲಿದೆ. ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಲೋಕಕಲ್ಯಾಣಕ್ಕಾಗಿ ನಿತ್ಯವೂ ಪೂಜೆ, ಹೋಮ ಹವನ, ಅರ್ಚನೆ ಮಾಡುತ್ತಿದ್ದೇವೆ. ಇವೆಲ್ಲವೂ ನಿಮ್ಮೆಲ್ಲರ ಹಿತಕ್ಕಾಗಿ. ಎಲ್ಲರೂ ಸುಖವಾಗಿರಬೇಕು ಎಂಬುದೇ ದೊಡ್ಡ ಹಿತವಾಗಿರುವ ಬಾವನೆಯೇ ದೊಡ್ಡ ಪುಣ್ಯ ನೀಡುತ್ತದೆ. ಸೋಂಕನ್ನು ದೇಶದಿಂದ ಹೊರದೂಡಲು ನಾವೆಲ್ಲರೂ ಕಟಿಬದ್ಧರಾಗೋಣ. ಮುಂದಿನ ಜನಾಂಗಕ್ಕೆ ನಾವು ರಕ್ಷಣೆ ನೀಡೋಣ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಸಮಾಜಕ್ಕೆ ಸಂದೇಶ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.