ಪವಿತ್ರ ದಿನಗಳಂದು ಮನೆಗಳಲ್ಲಿ ಪ್ರಾರ್ಥನೆ ನಡೆಸಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಎಂಬ ಮಹಾಮಾರಿ ಪ್ರಪಂಚದ ಎಲ್ಲ ಕ್ಷೇತ್ರಗಳಿಗೆ ಕೆಡುಕು ಉಂಟುಮಾಡಿದಂತೆ ಕ್ರೈಸ್ತರ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ.

ಫೆ.26ರಿಂದ ಆರಂಭವಾದ ಪವಿತ್ರ ಕಪ್ಪುತಿಂಗಳು ಸೇರಿದಂತೆ ಮುಂದಿನ ಎಪ್ರಿಲ್ ನಿಂದ ಕ್ರೈಸ್ತರ ಏ.5 ಗರಿಗಳ ಭಾನುವಾರ, ಏ.10 ಗುಡ್ ಫ್ರೈಡೆ, ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಏ.12ಕ್ಕೆ ಇದೆ. ಅದಲ್ಲದೇ ಕಪ್ಪುತಿಂಗಳ ಪ್ರತಿ ಶುಕ್ರವಾರ, ಭಾನುವಾರ ವಿಶೇಷವಾಗಿ ಯೇಸು ಕ್ರಿಸ್ತರ 14 ಶಿಲುಬೆಯ ಹಾದಿಗಳನ್ನು ನಡೆಸಿ ವಿಶೇಷ ಪ್ರಾರ್ಥನೆ ಮಾಡುವ ಸಮಯವಾಗಿತ್ತು.

ಈ ಬಾರಿ ಕೊರೊನಾ ವೈರಸ್ ಭೀತಿಯಿಂದ ಬೆಳ್ತಂಗಡಿ ತಾಲೂಕಿನ ಪ್ರಮುಖ ಚಚ್೯ಗಳಲ್ಲಿ ಹೊಲಿ ರಿಡೀಮರ್ ಚಚ್೯, ಬೆಳ್ತಂಗಡಿ , ಸಿರೋ ಮಲಬಾರ್ ಸೈಂಟ್ ಲಾರೆನ್ಸ್‌ ಕೆಥಡ್ರಾಲ್ ಬೆಳ್ತಂಗಡಿ, ಸಂತ ಅಂಥೋನಿ ಚಚ್೯ ಉಜಿರೆ, ಸೇಕ್ರೆಡ್ ಹಾಟ್೯ ಚಚ್೯ ಮಡಂತ್ಯಾರು ಹಾಗೂ ಬೆಳ್ತಂಗಡಿ ತಾಲೂಕಿನ ಎಲ್ಲ ಚಚ್೯ ಗಳಲ್ಲಿ ಬಲಿ ಪೂಜೆ ಇಲ್ಲದ್ದರಿಂದ ಎಲ್ಲರೂ ಮನೆಯಲ್ಲಿಯೇ ಇದ್ದು ಪ್ರಾರ್ಥನೆ ನಡೆಸಿ ಮತ್ತು ಟಿವಿಗಳಲ್ಲಿ ನೇರಪ್ರಸಾರ ಪೂಜೆ ನೋಡಿ ಪ್ರಾರ್ಥನೆ ಯಲ್ಲಿ ನಿರತರಾಗಲು ಸೂಚಿಸಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಡುವವರ ಹಾಗೂ ಅವರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ, ಸಮಾಜ ಸೇವಕರಿಗೆ, ಮಾಧ್ಯಮದವರಿಗೆ, ಜನಪ್ರತಿನಿಧಿಗಳಿಗೆ ವಿಶೇಷ ಪ್ರಾರ್ಥನೆಗಳನ್ನು ಮಾಡಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.