ಮೊಬೈಲಿಗೆ ಬರುವ ಒಟಿಪಿ ಸಂಖ್ಯೆ ಹೇಳಿದರೆ ಪಡಿತರ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಇರುವುದರಿಂದ ಈ ಬಾರಿಯ ಪಡಿತರ ವಿತರಣೆಯಲ್ಲಿ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಇದಕ್ಕಾಗಿ ಪಡಿತರ ವಿತರಣೆಯ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗಾಗಲೇ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಪಡಿತರ ವಿತರಣೆಯನ್ನು ಕಾರ್ಡುದಾರರ ಆಧಾರ್ ಗೆ ನೋಂದಣಿ ಮಾಡಿಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ನಂಬರ್ ಕಳುಹಿಸುವ ಮೂಲಕ ಪಡಿತರ ವಿತರಿಸಲು ತೀರ್ಮಾನಿಸಿದೆ.

ಈಗ ಮನೆಯ ಎಲ್ಲಾ ಸದಸ್ಯರು ಮನೆಯಲ್ಲೇ ಇರುವುದರಿಂದ ಆದಷ್ಟೂ ಯುವ ಜನತೆ ಪಡಿತರ ಪಡೆಯಲು ಬರಲಿ ಎಂದು ಸಲಹೆ ನೀಡಿದ್ದು, ಪಡಿತರ ಕ್ಕೆ ಬರುವಾಗ ಆಧಾರ್ ಗೆ ನೋಂದಣಿ ಮಾಡಿರುವ ಮೊಬೈಲ್ ಗಳನ್ನು ತರಬೇಕು.
ಆಧಾರ್ ನಲ್ಲಿ ನೋಂದಣಿ ಆಗದ ಮೊಬೈಲ್ ತಂದು ಒಟಿಪಿ ಬಾರದೇ ಇದ್ದಲ್ಲಿ ಕೂಡಲೇ ಆ ಮೊಬೈಲ್ ತರಲು ತಿಳಿಸುವುದರಿಂದಾಗಿ ನಿಮಗೆ ಯಾವುದೇ ಅಡಚಣೆಯಿಲ್ಲದೇ ಪಡಿತರ ವಿತರಣೆ ನಡೆಸಲು ಸಾಧ್ಯವಾಗುವುದು ಎಂದು ಆಹಾರ ಇಲಾಖೆ ಸೂಚಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.