ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಹಾಲು ಸಂಗ್ರಹ ಸದ್ಯಕ್ಕೆ ಸ್ಥಗಿತ

ಬೆಳ್ತಂಗಡಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ನಿಂದಾಗಿ ಅಗತ್ಯ ವಸ್ತುವಾದ ನಂದಿನಿ ಬಳಗದ ಹಾಲಿನ ಪೂರೈಕೆಗೆ ತೊಂದರೆ ಉಂಟಾಗಿರುವುದರಿಂದ ತನ್ನ ಸಂಘದ ಸದಸ್ಯರಿಂದ ಹಾಲಿನ ಸಂಗ್ರಹವನ್ನು ಸ್ಥಗಿತಗೊಳಿಸಿದೆ.

ಈಗಾಗಲೇ ಸುಮಾರು 9 ಲಕ್ಷ ಲೀಟರ್ ನಷ್ಟು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹಾಲು ಶೇಖರಣೆಗೊಂಡಿದೆ. ಇನ್ನು ಮಾರುಕಟ್ಟೆಗೆ ರವಾನಿಸಿದ ಹಾಲು ಡೇರಿಗೆ ವಾಪಾಸಾಗಿರುವುದರಿಂದ ಸಂಗ್ರಹ ಮತ್ತಷ್ಟು ಹೆಚ್ಚಿದೆ. ಇದಲ್ಲದೆ ಹೆಚ್ಚಾದ ಹಾಲನ್ನು ಪೌಡರ್ ಆಗಿ ಪರಿವರ್ತಿಸಲು, ಚನ್ನರಾಯಪಟ್ಟಣ, ಧಾರವಾಡ, ಮದರ್ ಡೇರಿ, ಮಂಡ್ಯ ಮುಂತಾದೆಡೆ ಪರಿವರ್ತನಾ ಘಟಕಗಳಲ್ಲಿ ಈಗಾಗಲೇ ತುಂಬಾ ದಾಸ್ತಾನು ಬಾಕಿ ಇರುವುದರಿಂದ ಪರಿವರ್ತನೆ ಕೂಡಾ ಅಸಾಧ್ಯ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದ್ದಾರೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲದ್ದರಿಂದ ರೈತರಿಂದ ಹಾಲು ಖರೀದಿ ಸ್ಥಗಿತಗೊಳಿಸಬೇಕು. ಇಲ್ಲವೇ ಹಾಲು ಮಾರಾಟಕ್ಕೆ ಅಂಗಡಿಗಳನ್ನು ತೆರೆಯಿಸಲು ಅವಕಾಶ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ತಾಲೂಕಿನಿಂದಲೂ ಹಾಲು ಸಂಗ್ರಹವಿಲ್ಲ:
ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳು ತನ್ನ ಸದಸ್ಯರಿಂದ ಹಾಲು ಸಂಗ್ರಹವನ್ನು ಸ್ಥಗಿತಗೊಳಿಸಿದೆ. ಬೆಳಗ್ಗೆ ಹಾಗೂ ಸಂಜೆಯ ಹಾಲಿನ ಸಂಗ್ರಹವನ್ನು ನಿಲ್ಲಿಸಿದೆ.

ಹಾಲು ಸಂಗ್ರಹಿಸಿಲ್ಲ:
ಬಳಂಜದ ಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟದ ಆದೇಶದ ಪ್ರಕಾರ ಮಾ.28 ರ ಸಂಜೆ ನಮ್ಮ ಸಂಘದಲ್ಲಿ ಹಾಲು ಸಂಗ್ರಹಿಸುವುದಿಲ್ಲ. ಸದಸ್ಯರು ಸಂಘಕ್ಕೆ ಹಾಲು ತರಬೇಡಿ ಎಂದು ವಿನಂತಿಸಿ ಕೊಳ್ಳಲಾಗುತ್ತಿದೆ.
ನಾಳೆ ಬೆಳಗ್ಗೆ ಹಾಲು ಸಂಗ್ರಹಿಸುವ ಬಗ್ಗೆ ಒಕ್ಕೂಟದ ಆದೇಶ ಬಂದ ಮೇಲೆ ತಿಳಿಸಲಾಗುವುದು ಎಂದು ಹಾ.ಉ.ಮ ಸ.ಸ ಬಳಂಜದ ಕಾರ್ಯದರ್ಶಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.