ಮಾ.‌21ರಂದು ಮೆಜೆಸ್ಟಿಕ್ ನಿಂದ ಮಂಗಳೂರು ಗೆ ಬಸ್ಸು ಹತ್ತಿ ದವರು ಪರೀಕ್ಷಿಸಿಕೊಳ್ಳಿ. ಕರಾಯದ ವ್ಯಕ್ತಿ ಊರಿಗೆ ಬಂದ ದಿನಾಂಕ‌ ಕೂಡಾ ಇದೇ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಮಾ.‌21 ರಂದು ಬೆಂಗಳೂರು ಕೆಂಪೇಗೌಡ ಬಸ್ಸು‌ನಿಲ್ದಾಣ ಮೆಜೆಸ್ಟಿಕ್ ನಿಂದ ಮಂಗಳೂರು ಮಾರ್ಗವಾಗಿ ಸರಕಾರಿ ಬಸ್ಸು ಪ್ರಯಾಣ‌ಮಾಡಿದವರು ಪರೀಕ್ಷಿಸಿಕೊಳ್ಳಿ.‌ಈ ಬಸ್ಸಿನಲ್ಲಿ ಅಂದು‌ಇದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ ಎಂದು ಕೆಎಸ್ ಆರ್ ಟಿ‌ಸಿ ಪ್ರಕಟಣೆ ನೀಡಿದೆ.

ಇದರಿಂದ ಪ್ರಯಾಣಿಕರಲ್ಲಿ, ಬಸ್ಸು ಡ್ರೈವರ್‌ ಮತ್ತು ಕಂಡೆಕ್ಟರ್, ಬಸ್ಸು ತಂಗುದಾಣದ ಪ್ರದೇಶದ ಜನರಲ್ಲಿ ಆತಂಕ‌ ಮನೆಮಾಡಿದೆ.

ಸದ್ರಿ ದಿನಾಂಕ: 21-03-2020 ರಂದು ಕರ್ನಾಟಕ ಸಾರಿಗೆ ಬಸ್ಸು ನಂ.KA19 F3329, ಸಂಜೆ 4.30 ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿರುತ್ತದೆ ಎಂದು ಬಸ್ಸಿನ ಸಂಖ್ಯೆ ಇಲಾಖೆ ಪ್ರಕಟಿಸಿದ್ದು , ಕರಾಯದ ವ್ಯಕ್ತಿ ಅಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಂದು ಊರಿನ ಕಡೆಗೆ
ಸರಕಾರಿ ಬಸ್ಸಿನಲ್ಲೇ ಪ್ರಯಾಣ ಬೆಳೆಸಿದ್ದರು.
ಉಪ್ಪಿನಂಗಡಿಯಲ್ಲಿ ಇಳಿದು ರಿಕ್ಷದಲ್ಲಿ‌‌ ಮನೆಗೆ ಬಂದಿದ್ದರು.

ಅಲ್ಲಿಂದ ಬಳಿಕ ಅವರು ಅಕ್ಕ ಪಕ್ಕದ ಮನೆ, ಅಂಗಡಿ, ಆಟದ‌ ಮೈದಾನ, ಮಸ್ಜಿದ್, ಉಪ್ಪಿನಂಗಡಿ ಠಾಣೆ, ಉಜಿರೆ ಬೆಳ್ತಂಗಡಿ ಕೆಲ‌ಭಾಗ, ಮೆಡಿಕಲ್ ಗೆ ಭೇಟಿ , ಉರೂಸ್ ನಲ್ಲಿ ಭಾಗಿಯಾಗಿದ್ದಾರೆಂಬೆಲ್ಲಾ ಮಾಹಿತಿ ಇದ್ದು ಜನ ವಿಚಾರ ಅರಿತು ತತ್ತರಿಸಿ ಹೋಗಿದ್ದಾರೆ.

ಇದೀಗ ಬಸ್ಸು ನಿಗಮದ ಟಿಕೇಟ್ ಬುಕ್ಕಿಂಗ್ ಮಾಡಿ ಬಂದ ಪ್ರಯಾಣಿಕರನ್ನು ಮಾತ್ರ ಸಂಪರ್ಕಸಲು ನಿಗಮಕ್ಕೆ ಸಾಧ್ಯವಿದ್ದು, ಉಳಿದ ಪ್ರಯಾಣಿಕರು ಯಾರಾದರೂ ಬಂದಿದ್ದಲ್ಲಿ ಅವರನ್ನು ಪತ್ತೆ ಹಚ್ಚೂದು ಆರೋಗ್ಯ ಇಲಾಖೆಗೆ ಸಾಹಸದ ಮಾತಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.