ತಾಲೂಕಿನ ಜನರ ಕಷ್ಟಕ್ಕೆ ತಕ್ಷಣ ಸ್ಪಂದನೆ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಹೇಳಿಕೆ

ಬೆಳ್ತಂಗಡಿ: ಶಾಸಕರಾದ ಹರೀಶ್‌ ಪೂಂಜ ಅವರು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ವಾರ್‌ ರೂಂ ತೆರೆದು ತಾಲೂಕಿನ ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿದ್ದಾರೆ. ಅವರಿಗೆ ತಾಲೂಕಿನ ಆಡಳಿತವು ಸಂಪೂರ್ಣ ಸಹಕಾರ ನೀಡುತ್ತಿದೆ. ತಾಲೂಕಿನಲ್ಲಿ ಯಾರಿಗಾರದೂ ಆಹಾರ ಅಥವಾ ಆರೋಗ್ಯ ಸಂಬಂಧಿ ತೊಂದರೆಯಾದರೆ ಈ ವಾರ್‌ ರೂಂ ಅನ್ನು ಸಂಪರ್ಕಿಸಬಹುದು ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ತಿಳಿಸಿದ್ದಾರೆ.

ಕೊರೊನಾ ವೈರಸ್ ತಲ್ಲಣದಿಂದ ದೇಶಾದ್ಯಂತ ಜನರು ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಕೇಂದ್ರ ಸರ್ಕಾರವು ಸುಮಾರು 1.70 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದು, ಅಂತೆಯೇ ರಾಜ್ಯದ ಬಿಜೆಪಿ ಸರ್ಕಾರವು ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ಸರಕಾರ ತಕ್ಷಣ ಸ್ಪಂದನೆ:
ದೇಶದ 80 ಕೋಟಿ ಬಡವರಿಗೆ ಸಹಾಯಧನ, ಅಕ್ಕಿ, ಗೋಧಿ, ಬೇಳೆ ವಿತರಣೆಗೆ ಕ್ರಮ ಕೈಗೊಂಡಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವಿಮೆ ಸೇರಿದಂತೆ ಮೊದಲಾದ ಕೊಡುಗೆ ಘೋಷಿಸಿದೆ. ಆರ್‌ಬಿಐ ರೆಪೋ ದರ ಕಡಿತಗೊಳಿಸಿರುವುದು, ಸಾಲಗಳ ಇಎಂಐ ಮೂರು ತಿಂಗಳು ಮುಂದೂಡಿದೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಪಡಿತರ ಸಾಮಾಗ್ರಿಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ನಿಗಾ ಇಡುವಂತೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಬಿಜೆಪಿಯ ಮುಖಂಡರು, ಕಾರ್ಯಕರ್ತರು ಕೂಡ ಜನರ ಸಂಪರ್ಕದಲ್ಲಿದ್ದು ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ರಸ್ತೆಗೆ ಇಳಿಯದಂತೆ ಸಾರ್ವಜನಿಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಯಂತ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಅಗತ್ಯ ವಸ್ತುಗಳ ಲಭ್ಯತೆ ಇದೆಯಾದರೂ ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಜನರಿಗೆ ಏನಾದರೂ ಸಮಸ್ಯೆ ಎದುರಾದರೆ ಅವರ ಸ್ಪಂದನಕ್ಕೆ ನಾವು ಸಿದ್ಧರಿದ್ದೇವೆ ಎಂದರು.

ಸಾರ್ವಜನಿಕರಿಗೆ ಅಗತ್ಯ ವಸ್ತು, ಆರೋಗ್ಯ ಅಥವಾ ಆಹಾರ ಸಮಸ್ಯೆ ಏನಾದರೂ ಎದುರಾದರೆ
ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದ್ದಾರೆ.

9901212207 ಶಾಸಕರ ಕಚೇರಿ,

9008161300 ಸೀತಾರಾಮ ಬೆಳಾಲು,

8147953299 ಸಂದೀಪ್

9449333763 ಜಯಂತ್ ಕೋಟ್ಯಾನ್,

9448501447 ಶ್ರೀನಿವಾಸ ರಾವ್,

9008385149 ಸುಬ್ರಮಣ್ಯ ಗೌಡ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.