ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ 10 ತಿಂಗಳ ಮಗುವಿಗೆ ಕೊರೊನಾ ದೃಢ ಕೇರಳ ಪ್ರವಾಸ ಕೈಗೊಂಡಿದ್ದ‌ಕುಟುಂಬದ ಮಗು

ಕೊರೊನಾ ಮಹಾಮರಿ ಅಟ್ಟಹಾಸವನ್ನು ಮೆರೆಯುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೦ ತಿಂಗಳ ಮಗುವಿಗೆ ಕೊರೊನಾ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜಿಪನಡು ಗ್ರಾಮದ ಕುಟುಂಬ ಕಳೆದೊಂದು ವಾರದ ಹಿಂದೆ ಕೇರಳದ ಕಾಸರಗೋಡಿಗೆ ತೆರಳಿದ್ದರು.

ನಂತರದ ಮನೆಗೆ ಬಂದಾಗ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವಿನ ಸ್ಕ್ವಾಬ್ ಮತ್ತು ರಕ್ತದ ಮಾದರಿ ಪರೀಕ್ಷೆಗೊಳಪಡಿಸಲಾಗಿದ್ದು ಕಾಯಿಲೆ ದೃಢಪಟ್ಟಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೆಟಿನ್‌ನಲ್ಲಿ ಘೋಷಣೆಯಾಗಿದೆ.

ಇದೀಗ ಮಗುವಿನ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಸಜಿಪನಡು ಗ್ರಾಮದ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿರುವಂತೆ ಆರೋಗ್ಯ ಇಲಾಖೆಯಿಂದ ಕ್ರಮ ಜರುಗಿದೆ.

ಬಂಟ್ವಾಳದ ಇಡೀ ಗ್ರಾಮವೇ ಕ್ವಾರೈಂಟೈನ್ :
ಸೋಂಕು ದೃಢಪಟ್ಟಿರುವ ೧೦ ತಿಂಗಳ ಮಗುವಿನ ಕುಟುಂಬ ವಾಸಿಸುವ ಇಡೀ ಗ್ರಾಮವನ್ನು ಕ್ವಾರೈಂಟನ್ ನಲ್ಲಿ ಇಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ. ಇದರಿಂದಾಗಿ ಈ ಗ್ರಾಮದ ಒಳಗೆ ಹಾಗೂ ಹೊರಗೆ ಹೋಗುವಂತಿಲ್ಲದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.