ಬೆಳ್ತಂಗಡಿಯಲ್ಲಿ ವಾರ್‌ರೂಮ್ ಕಾರ್ಯಾಚರಣೆ ಆರಂಭ ಮಿನಿ ವಿಧಾನ ಸೌಧದಲ್ಲಿ ಇಂದು ಶಾಸಕರಿಂದವ್ಯವಸ್ಥೆ ಪರಿಶೀಲನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಕೊರೊನಾ ಬಗ್ಗೆ ತುರ್ತು ಸ್ಪಂದನೆಗಾಗಿ ಅನುಕೂಲಕ್ಕಾಗಿ ಕೊರೊನಾ ವಿರುದ್ಧ ವಾರ್‌ರೂಮ್ ಕಾರ್ಯಾಚರಣೆ ಆರಂಭಗೊಂಡಿದೆ.

ಸಹಾಯ ಅಗತ್ಯವಿರುವ ವ್ಯಕ್ತಿಗಳು ಈ ಕೇಂದ್ರ್ರದ ದೂರವಾಣಿ ಸಂಖ್ಯೆ (08256)-232047 ಮತ್ತು 9901212207 ನಂಬರ್ (ಶಾಸಕರ ಕಚೇರಿ ನಂಬರ್) ಗೆ ಕರೆ ಮಾಡಿದರೆ ಇಲ್ಲಿಂದ ಪರಿಹಾರ ಕಾರ್ಯ ಮಾಡಲಾಗುತ್ತದೆ.

ಈ ಕೇಂದ್ರದಲ್ಲಿ ಶಾಸಕರ ಕಚೇರಿಯಿಂದ ಅವರ ಆಪ್ತ ಸಹಾಯಕರು ಒಬ್ಬರು, ಕಂದಾಯ ಇಲಾಖೆಯಿಂದ ಇಬ್ಬರು, ತಾಲೂಕು ಪಂಚಾಯತ್ ಕಡೆಯಿಂದ ಒಬ್ಬರು, ಆರೋಗ್ಯ ಇಲಾಖೆಯಿಂದ ಒಬ್ಬರು, ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದಿಂದ ಒಬ್ಬರು ಮತ್ತು ಪೊಲೀಸ್ ಇಲಾಖೆಯಿಂದ ಒಬ್ಬರು ಇರುವಂತೆ ಕ್ರಮ ಕೈಗೊಳ್ಳಲಾಗಿದೆ.

ಸಹಾಯ ಯಾಚಿಸಿ ಈ ಕೇಂದ್ರಕ್ಕೆ ಕರೆಬಂದ ತಕ್ಷಣ ವಿವಿಧ ಇಲಾಖೆಗಳ ಮೂಲಕ ವ್ಯವಹರಿಸಿ ಸಂಬಂಧಪಟ್ಟವರು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಲಿದ್ದಾರೆ.
ಇಂದು ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮತ್ತು ಅಧಿಕಾರಿಗಳು ವಾರ್ ರೂಮ್‌ಗೆ ಭೇಟಿ ಮಾಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಮಾಡಿದರು. ಬಳಿಕ ಅವರು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.