HomePage_Banner_
HomePage_Banner_
HomePage_Banner_

ಹೊಸಂಗಡಿ ಫಲ್ಗುಣಿ ನದಿಯಲ್ಲಿ ಆಕಸ್ಮಿಕಕ್ಕೊಳಗಾಗಿ ಇಬ್ಬರು ದಾರುಣ ಸಾವು

ಹೊಸಂಗಡಿ: ಇಲ್ಲಿನ ಕೊಡಿಂಗೇರಿ ಎಂಬಲ್ಲಿ ಫಲ್ಗುನಿ ನದಿಯಲ್ಲಿ ಇಂದು ಬೆಳಿಗ್ಗೆ ನಡೆದ ಆಕಸ್ಮಿಕ ಘಟನೆಯಿಂದ 8 ವರ್ಷದ ಬಾಲಕ ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಶಿರ್ತಾಡಿ ಬಳಿ ಪಣಪಿಲ್ ದರ್ಖಾಸು ನಿವಾಸಿ ವಸಂತಿ ಮತ್ತು ಮಹಾಬಲ ಪೂಜಾರಿ ದಂಪತಿ ಪುತ್ರ ವಾಸುದೇವ (22ವ.) ಮತ್ತು ಶಿರ್ತಾಡಿ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಮತ್ತು ಗೀತಾ ದಂಪತಿ ಪುತ್ರ ಇಶಾನ್(8) ಎಂಬವರೆಂದು ಗುರುತಿಸಲಾಗಿದೆ.

ಇವರು ಹೊಸಂಗಡಿ ಗ್ರಾಮದ ಸುನಿಲ್ ಎಂಬವರ ಮನೆಗೆ ನೆಂಟರಿಸ್ಟರಾಗಿ ಬಂದಿದ್ದರು. ಇಂದು ಬೆಳಿಗ್ಗೆ ಸುನಿಲ್ ಅವರು ಹುಲ್ಲು ಕೀಳಲು ತೋಟದ ಕಡೆಗೆ ಹೋಗಿದ್ದರು. ಕೆಲವೇ ಹೊತ್ತಿನಲ್ಲಿ ಈ ಇಬ್ಬರೂ ಕೂಡ ಫಲ್ಗುಣಿ ನದಿ ಪಾತ್ರದಲ್ಲೇ ಇರುವ ತೋಟದ ಕಡೆಗೆ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಇವರು  ಕಾಣುವುದಿಲ್ಲ ಯಾಕೆ ಎಂದು ಸುನಿಲ್ ಅವರು ಹುಡುಕಾಡಿದಾಗ ಈ ಇಬ್ಬರೂ  ಕೂಡ ತೋಟಕ್ಕೆ ತಾಗಿಕೊಂಡಂತೆ ಇರುವ ನದಿ ಪಾತ್ರದ ದೊಡ್ಡ ಭಂಡೆ ಕಲ್ಲಿನ ಕೆಳಗಡೆ ನದಿಯಲ್ಲಿ ಬಿದ್ದಿರುವ ರೀತಿಯಲ್ಲಿ ಒಬ್ಬರ ಮೃತದೇಹ ಮೇಲಕ್ಕೆ ಗೊತ್ತಾಗುವಂತೆ ಕಾಣಿಸುತ್ತಿತ್ತು. ಈ ಇಬ್ಬರೂ ಕೂಡ ತೋಟದ ಪಾರ್ಶ್ವದಲ್ಲೇ ಇರುವ ಭಂಡೆ ಕಲ್ಲಿನ ಮೇಲೆ ಆಯತಪ್ಪಿ ಆಕಸ್ಮಿಕಕ್ಕೊಳಗಾಗಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಧಾವಿಸಿದ್ದು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.