HomePage_Banner_
HomePage_Banner_
HomePage_Banner_

ಬದುಕನ್ನೆ ಬದಲಾಯಿಸಬಹುದು ಈ ರಜಾ

Advt_NewsUnder_1

ಜಗತ್ತನ್ನ ತನ್ನ ಮುಷ್ಟಿಯಲ್ಲಿ ಹಿಡಿದು ಆಟವಾಡಿಸುತ್ತ ಇರೋ ಮಹಾಮಾರಿ ಕೋರೋನ ವಿರುದ್ಧ ನಾವೆಲ್ಲ ಮಾತಿಗಿಂತ ಮೌನ ಲೇಸು ಎಂಬಂತೆ ಮನೆಯಲ್ಲೇ ಕೂತು ಯುದ್ಧ ಆರಂಭಿಸಿದ್ದೆವೆ‌.

ನಿರಂತರವಾಗಿ ಹಬ್ಬುತ್ತಿರೋ ಈ ಮಹಾಮಾರಿ ಯಾವಾಗ ಗುಣವಾಗುತ್ತೋ ನಾ ಅರಿಯೇ ಆದರೆ ನಮ್ಮ ಪ್ರಯತ್ನದಲ್ಲಿ ಜಯವನ್ನ ಕಾಣುತ್ತೆವೆ ಎಂಬ ವಿಶ್ವಾಸವಿದೆ. 

ಆದರೆ ಖಂಡಿತ ನಮ್ಮ‌ ಮನೆಯಲ್ಲಿ, ಮನಸಲ್ಲಿ ಬದಲಾವಣೆಯಾಗುವುದಂತೂ ನಿಜ.

#ಗಂಡ- ಹೆಂಡಿರ ಮಕ್ಕಳ ಮಾತುಕತೆಯೇ ಇಲ್ಲದ ಮನೆಯಲ್ಲಿ ಇಂದು ಮಾತುಗಳು ಆರಂಭವಾಗಿದೆ. 4 ಗೊಡೆಯ ಒಳಗೆ ಇರೋ 4 ಮನಸ್ಸುಗಳು ಮಾತಾಡದೆ ಇರಲೂ ಸಾಧ್ಯವೇ.
#ಸದಾ ಕುಡಿತದ ನಶೆಯಲ್ಲೇ ಇರುತಿದ್ದ ತಂದೆಯ ಮುಖವನ್ನ ನೋಡಿದ್ದ ಮಕ್ಕಳು ಇಂದು, ಅಪ್ಪನ ಜೊತೆ ಆಟವಾಡುತ್ತ ಇದ್ದಾರೆ.
#ಕೃಷಿಯ ಬಗ್ಗೆ ಆಸಕ್ತಿ ಇಲ್ಲದೆ ಹೊರಗೆ ಕೆಲಸಕ್ಕೆ ಹೋದ ಮಗ, ತೊಟದಲ್ಲಿ ಕೆಲಸ ಮಾಡಿ ಬರುತಿದ್ದಾನೆ
#ಮನೆಗೆ ಬರೋಕೆ ರಜಾನೆ ಇಲ್ಲ ಎಂದವರೆಲ್ಲ, ಸತ್ರೆ ಮನೇಲಿ ಸಾಯೋಣ ಎಂಬಾಂತೆ ರಾತ್ರೋ ರಾತ್ರಿ ಓಡೋಡಿ ಮನೆಗೆ ಬಂದಿದ್ದಾರೆ.
#ಪ್ಯಾಮೀಲಿಯಲ್ಲಿ ಯಾರೆಲ್ಲ ಇದ್ದಾರೆ ಅಂತಾನೆ ಗೊತ್ತಿಲ್ಲದವರೆಲ್ಲ ಕಜೀನ್, ಆಂಟಿ,ಅಂಕಲ್ ಜೊತೆ ವಿಡಿಯೋ ಕಾಲ್ ಮಾಡ್ತ ಇದ್ದಾರೆ‌
#ಪಬ್ಜಿ ಮರೆತು ಕೇರಂ, ಲೂಡೋ,ಸೆಟ್, ಲಗೋರಿ‌ ಆಟದಲ್ಲಿ ಮನೆ ಮಕ್ಕಳು ಬ್ಯುಸಿ‌ ಆಗಿದ್ದಾರೆ.
#ಮೊಬೈಲ್ ಡಾಟಾ ಖಾಲಿ‌ ಮಾಡೋರು ಮಧ್ಯೆ ಪುಸ್ತಕ ಓದಿ ಮುಗಿಸೋರು ಇದ್ದಾರೆ.

ನಮ್ಮ ಬಗ್ಗೆ ಯಾರಾದ್ರು ಪ್ರಶ್ನೆ ಕೇಳಿದ್ರೆ ನಾವು ಉತ್ತರ ಕೊಡೊಲೆ ಆಗದೆ ಮೌನಿಯಾಗ್ತಿವಿ. ಯಾಕಾಂದ್ರೆ ನಾವು ಎಲ್ಲರ ಬಗ್ಗೆ ಯೋಚಿಸ್ತಿವಿ ಅದ್ರ ನಮ್ ಬಗ್ಗೆ ಯೋಚಿಸೋಕೆ ಸಮಯವೇ ಇಲ್ಲ. ಯಾಕೇ ಈ ದಿನಗಳಲ್ಲಿ ನಾವು ನಮ್ಮ,‌ನಮ್ಮವರ ಬಗ್ಗೆ ಯೋಚಿಸಬಾರ್ದು ಅಲ್ವ??

ಒಮ್ಮೆ ಪ್ರಯತ್ನ ಪಡಿ, ಪ್ರತಿಯೊಬ್ಬರ ಮನೆಯೆ ಇಂದು ದೇವಾಲಯ,‌ಮನೆಯಿಂದಲೇ ದೇವರನ್ನ ಕಾಣೋಣ, ಬರುವಂತ ಶುಭ ಸುದ್ದಿಗಳೇ ಇಂದು ಶುಭಾ ಸಮಾರಂಭ ಕೂತಲ್ಲಿಯೇ ಸಂಭ್ರಮ ಪಡೋಣ, ವಿಶ್ವವೇ ಕೈ ಮುಗಿಯುತ್ತಿದೆ ಸಂಸ್ಕ್ರತಿ‌ ಮರೆತವರನ್ನ ಎಚ್ಚರಿಸೋಣ, ಒಡೆದ ಕುಟುಂಬಗಳು‌ ಮತ್ತೆ ಕೂಡು ಕುಟುಂಬವಾಗಿದೆ ಇದು ನಮ್ಮತನವೆನ್ನೋಣ, ಮೌನಿಯಾಗಿ ದೂರವಿದ್ದಷ್ಟು ಆರೋಗ್ಯಕ್ಕೆ ಒಳ್ಳೆಯದು ತಾಳ್ಮೆ ಕಲಿಯೋಣ,
ಪ್ರತೀ‌ ಮನೆಯಲ್ಲೂ‌ ಮಾತು ಹೆಚ್ಚಾಗಿದೆ, ನಮ್ಮವರ ಜೊತೆ ಇರುವುದೇ ನಿಜವಾದ ಸ್ವರ್ಗ, ನಿಜವಾದ ಪ್ರೀತಿ ಎನ್ನೋಣ
ಕಲಾವಿದರ ಕಲೆಗಳು ಒಂದೊಂದಾಗಿ ಹೊರಬರುತ್ತಿದೆ ನಾವು ಕೂಡ ಪ್ರಯತ್ನ‌ ಪಡೋಣ,
ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ನಿರ್ಧಾರ ತಗೊಳದಕ್ಕೆ ಬೇಕಾದಷ್ಟೂ ಸಮಯ ಹಾಗೂ‌ ನಿಮ್ಮವರು ನಿಮ್ಮೊಂದಿಗಿದ್ದಾರೆ, ಸರಿಯಾದ ನಿರ್ಧಾರ ತಗೊಳೋಣ.

ಇವೆರಲ್ಲರ ಮಧ್ಯೆ ಸಮಯವೇ ಹೋಗ್ತ ಇಲ್ಲ, ರಜಾ ಬೋರು, ಎಷ್ಟ್ ಟಿಕ್ ಟಾಕ್ ಮಾಡಿದ್ರು ಟೈಮ್ ಪಾಸ್ ಆಗ್ತಿಲ್ಲ ಅನ್ನೋರಿಗೆ ನಿಮ್ಮ ಹಣೆಬರವೇ ಇಷ್ಟು ಎನ್ನೋಣ..

ಕೊನೆಯಾದಾಗಿ‌ ಸಾವಿನ ಭಯದ ಮುಂದೆ ಬದುಕಿನ‌ ಆಸೆಗಳನ್ನ ಕಂಡು, ಮನೆಯಲ್ಲೇ ಕೂತು‌ ಹೊಸ ಬದುಕನ್ನ ನಾವೆಲ್ಲರು ಸೇರಿ ಕಟ್ಟೊಣ, ದೇಶ ಸೇವೆ ಮಾಡಲು‌ ಇದಕ್ಕಿಂತ ಉತ್ತಮ‌ ದಾರಿ ಇನ್ನೊಂದು ಬಾರದು, ಮುಂದೆ ಬಾರದಿರಲಿ ಕೂಡ..

#ಚಂದ್ರಹಾಸ ಬಳಂಜ

Advt_NewsUnder_2
Advt_NewsUnder_2

About The Author

Related posts

3 Comments

  1. Sainath poojary

    Hawdu anna nijavada maatugalu…
    Aritevu prakritiya maayajaalava…
    Helutiddaru addu ee modern yugakke kaalave karana endu…adare kaalvu adara innondu mukavannu toriside…kaala badalagalilla…manushyane tannannu tane badalayisikondu kaalada mele aropisidanendu.

    Reply

Leave a Reply

Your email address will not be published. Required fields are marked *

Copy Protected by Chetan's WP-Copyprotect.