ಲಾಕ್‍ಡೌನ್‍ನ 2ನೇ ದಿನ: ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ತಾಲೂಕಿನ ಜನರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

* ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯಲು ಮಾರ್ಕಿಂಗ್
* ಪೆಟ್ರೋಲ್ ಬಂಕ್‍ಗಳಲ್ಲಿ ಜನಸಂದಣಿ

ಬೆಳ್ತಂಗಡಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ದೇಶಾದ್ಯಂತ 21ದಿನಗಳ ಕಫ್ರ್ಯೂ ಮಾದರಿಯ ಲಾಕ್‍ಡೌನ್, ನಿಷೇಧಾಜ್ಞೆಯ 2ನೇ ದಿನವು ತಾಲೂಕಿನ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಮಾ.26ರ ಬೆಳಗ್ಗೆಯೇ ದಿನಸಿ ಅಂಗಡಿಗಳಲ್ಲಿ ಗುಂಪಾಗಿ ಸಾಮಾಗ್ರಿಗಳನ್ನು ಖರೀದಿಸುವುದು ಕಂಡು ಬಂತು. ನಿಗದಿತ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯಿದ್ದರೂ ಕೆಲವು ಅಂಗಡಿಗಳಲ್ಲಿ ಪಾಲಿಸದಿರುವುದು ಕಂಡು ಬಂತು.

ಅಂಗಡಿಗಳಲ್ಲಿ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್:
ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಗಳಿಗೆ ತೆರಳುವುದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ಜನಸಂದಣಿ ಹೆಚ್ಚಾಗಿ ವೈರಸ್ ಹರಡದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅದಕ್ಕಾಗಿ ದಿನಸಿ ಅಂಗಡಿಗಳು ಹಾಗೂ ತರಕಾರಿ ಅಂಗಡಿ, ಮೆಡಿಕಲ್‍ಗಳಲ್ಲಿ 1 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸುಣ್ಣದಿಂದ (ಮಾರ್ಕಿಂಗ್) ಗುರುತಿಸಲಾಗಿದೆ. ಒಬ್ಬರಾದ ನಂತರ ಒಬ್ಬರು ನಿಗದಿತ ಅಂತರ ಕಾಯ್ದು ಸಾಮಾಗ್ರಿಗಳನ್ನು ಖರೀದಿಸಬೇಕಾಗಿದೆ. ಸಾಮಾಗ್ರಿಗಳ ಖರೀದಿಸುವವರು ಸುರಕ್ಷತೆಗಾಗಿ ಮಾಸ್ಕ್ ಧರಿಸಿಕೊಂಡಿರುವುದು ಕಂಡು ಬಂತು. ನಗರದಲ್ಲಿ ಕೆಲವು ಬೇಕರಿ ತಿಂಡಿಗಳ ಅಂಗಡಿಗಳು ತೆರೆದಿದ್ದವು.

ಹೆಚ್ಚು ಬೆಲೆಗೆ ಮಾರಾಟ?:
ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವ ಈ ಸಮಯದಲ್ಲಿಯೇ ಕೆಲವರು ಅದನ್ನು ಅವಕಾಶವಾಗಿ ಬಳಸಿ ಮಾರುಕಟ್ಟೆಯ ನಿಗದಿತ ದರಕ್ಕಿಂತ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ. ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಅಗತ್ಯ ವಸ್ತುವಿಗೆ ಹೆಚ್ಚಿನ ದರ ವಿಧಿಸಿದ್ದರ ಬಗ್ಗೆ ಮಾಹಿತಿ ಬಂದಿದೆ.

ಬೆಳ್ತಂಗಡಿಯ ಪೆಟ್ರೋಲ್ ಬಂಕ್‍ನಲ್ಲಿ ಜನಸಂದಣಿ:
ಬೆಳ್ತಂಗಡಿಯ ಮುಖ್ಯರಸ್ತೆಗಳಲ್ಲಿ ಎರಡು ಪೆಟ್ರೋಲ್ ಬಂಕ್‍ಗಳಿದ್ದು ಅದರಲ್ಲಿ ಹಳೆಕೋಟೆಯಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಇಂಧನ ಖಾಲಿಯಾಗಿಯಾದ್ದರಿಂದ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಇರುವ ಬಂಕ್‍ನಲ್ಲಿ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ವಿಪರೀತ ಜನಸಂದಣಿ ಉಂಟಾಯಿತು.

ಭಕ್ತರಿಗೆ ಅವಕಾಶವಿಲ್ಲ:
ಕೊರೊನಾ ಹರಡುವಿಕೆ ತಡೆಯಲು ಸದಾಶಿವರುದ್ರ ದೇವಸ್ಥಾನದಲ್ಲಿ ಯಾವುದೇ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶವಿಲ್ಲ. ಈ ಬಗ್ಗೆ ಮುಂದಿನ ಆದೇಶದವರೆಗೆ ಭಕ್ತರು ಸಹಕರಿಸಬೇಕಾಗಿ ಆಡಳಿತ ಮೊಕ್ತೇಸರರಾದ ಸುಭಾಶ್ಚಂದ್ರ ಸುರ್ಯಗುತ್ತು ವಿನಂತಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.