ಕೇಂದ್ರ ಸರಕಾರದಿಂದ 80 ಕೋಟಿ ಭಾರತೀಯರಿಗೆ 2ರೂ.ಗೆ ಗೋಧಿ, 3ರೂ.ಗೆ ಅಕ್ಕಿ

ಬೆಳ್ತಂಗಡಿ: ಭಾರತದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸಿದ ಮರುದಿನ ಮಹತ್ವದ ನಿರ್ಧಾರಕ್ಕೆ ಬಂದಿದೆ. 80 ಕೋಟಿ ಭಾರತೀಯರಿಗೆ 2 ರೂ.ಗೆ ಒಂದು ಕೆ.ಜಿ. ಗೋಧಿ ಹಾಗೂ 3ರೂ.ಗೆ ಒಂದು ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಿದೆ.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕುರಿತು ಮಾತನಾಡಿ ಕೇಂದ್ರ ಸರಕಾರವು ಪ್ರತಿ ವ್ಯಕ್ತಿಗೆ ಮಾಸಿಕ 7ಕೆ.ಜಿ. ಆಹಾರ ಧಾನ್ಯ ನೀಡಲು ನಿರ್ಧರಿಸಿದೆ. ಮಾರುಕಟ್ಟೆ ಯಲ್ಲಿ ಕೆ.ಜಿ.ಗೋಧಿಗೆ 27 ರೂ. ಹಾಗೂ ಅಕ್ಕಿಗೆ 37ರೂ. ಇದೆ. ಆದರೆ ಸಬ್ಸಿಡಿ ದರದಲ್ಲಿ ಕೇಂದ್ರ ಸರಕಾರವು 2 ರೂ.ಗೆ ಒಂದು ಕೆ.ಜಿ. ಗೋಧಿ ಹಾಗೂ 3ರೂ.ಗೆ ಒಂದು ಕೆ.ಜಿ. ಅಕ್ಕಿ ನೀಡಲು ಮುಂದಾಗಿದೆ.

ಇದಲ್ಲದೇ ಕಟ್ಟಡ ಕಾರ್ಮಿಕರಿಗೆ ಉಚಿತ ಊಟ ನೀಡಲು ಕೇಂದ್ರ ಸರಕಾರ ಯೋಜಿಸಿದೆ. ಹಾಗೆಯೇ ಅಕ್ರಮವಾಗಿ ಆಹಾರ ಸಾಮಾಗ್ರಿಗಳನ್ನು ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಾವೇಡಕರ್ ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.