HomePage_Banner_
HomePage_Banner_
HomePage_Banner_

ಸೀನಿಯರ್ ಛೇಂಬರ್ 19 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ತಾಲೂಕಿನ ಇಬ್ಬರಿಗೆ ಗೌರವ ಪುರಸ್ಕಾರ

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ನಿಂದ ಗುರುತಿಸಲ್ಪಟ್ಟ ಉಜಿರೆಯ ಅಂಜನಾದೇವಿ ಅವರಿಗೆ ಸೀನಿಯರ್ ಛೇಂಬರ್ 19 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ವಿಜಯಸ್ಮೃತಿ ಪುರಸ್ಕಾರ ಹಾಗೂ ಕನ್ಯಾಡಿಯ ಸೇವಾ ಭಾರತಿ ಸಂಸ್ಥಾಪಕ ವಿನಾಯಕ ರಾವ್ ಅವರಿಗೆ ರಾಷ್ಟ್ರದ ಜವಾಬ್ಧಾರಿಯುತ ನಾಗರಿಕ ಗೌರವ ನೀಡಿ ಪುರಸ್ಕರಿಸಲಾಯಿತು.

ಕೇರಳದ ಚೆಂಗನಾಶೇರಿಯಲ್ಲಿ ಜರುಗಿದ ಸಮ್ಮೇಳನದಲ್ಲಿ ಈ ಪುರಸ್ಕಾರಗಳನ್ನು ಅರ್ಹರಿಗೆ ನೀಡಿ ಪುರಸ್ಕರಿಸಲಾಯಿತು.
ಬೆಳ್ತಂಗಡಿ ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷೆಯಾಗಿರುವ ಅಂಜನಾದೇವಿ ಅವರು ಈ ಪುರಸ್ಕಾರವನ್ನು ನೇರವಾಗಿ ಪಡೆದರೆ,
ವಿನಾಯಕ ರಾವ್ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಪೃಥ್ವಿರಂಜನ್ ರಾವ್ ಪುರಸ್ಕಾರ ಸ್ವೀಕರಿಸಿದರು.

ಇದರ ಜೊತೆಗೆ ಮಂಜುಶ್ರೀ ಸೀನಿಯರ್ ಛೇಂಬರ್ ಬೆಳ್ತಂಗಡಿ ಇದಕ್ಕೆ ಅತ್ಯುತ್ತಮ ಸಾರ್ವಜನಿಕ ಸೇವಾ ವಿಭಾಗದ ದ್ವಿತೀಯ ಪ್ರಶಸ್ತಿ, ಅತ್ಯುತ್ತಮ ಕಾರ್ಯಕ್ರಮಗಳ ವರದಿಗಾಗಿ ಪ್ರಶಂಸನಾ ಪತ್ರ ದೊರಕಿತು.

ಸೀನಿಯರ್ ಛೇಂಬರ್ ಸ್ಥಾಪಕಾಧ್ಯಕ್ಷ ಡಾ. ಪ್ರಮೋದ್ ಆರ್ ನಾಯ್ಕ್, ಪ್ರಸಕ್ತ ಅಧ್ಯಕ್ಷ ಪಿ.ಪಿ ಜೋಯ್, ಮೋಲ್ಸಿ ಜೋಯ್, ಚುನಾಯಿತ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಪೃಥ್ವಿರಂಜನ್ ರಾವ್, ಅಂಜನಾದೇವಿ ಅವರ ಕುಟುಂಬದವರು ಭಾಗಿಯಾಗಿದ್ದರು.

ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಾಬುರಾಜ್,ಮುಖ್ಯ ಅತಿಥಿ ಜಾರ್ಜ್ ಕುಳಂಗರ ನೀಡಿದರು.
.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.