ಕೊಕ್ಕಡ ಸುದ್ದಿ ಪತ್ರಿಕಾ ವಿತರಕ ಜ್ಞಾನಚಂದ್ರ ಭಟ್ ನಿಧನ

Advt_NewsUnder_1
Advt_NewsUnder_1

ಕೊಕ್ಕಡ: ಪತ್ರಿಕಾ ವಿತರಕರಾಗಿ ಕೊಕ್ಕಡ ಭಾಗದಲ್ಲಿ ಸುಮಾರು ಮೂವತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಜ್ಞಾನಚಂದ್ರ ಭಟ್ (೫೯ವ.) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಾ. ೨೪ ರಂದು ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.

ಕೊಕ್ಕಡದಲ್ಲಿ ಆರಂಭದಲ್ಲಿ ಶ್ರೀದುರ್ಗಾ ವೆಲ್ಡಿಂಗ್‌ಶಾಪ್ ನಡೆಸುತ್ತಿದ್ದ ಇವರು ವೆಲ್ಡ್ ಭಟ್ರು ಎಂದೇ ಚಿರಪರಿಚಿತರು. ಕೊಕ್ಕಡ ಜೋಡುಮಾರ್ಗದಲ್ಲಿ ನಂತರದ ವರ್ಷಗಳಲ್ಲಿ ಬಹುತೇಕ ಎಲ್ಲಾ ದಿನಪತ್ರಿಕೆ, ಸುದ್ದಿ ಬಿಡುಗಡೆ ವಾರಪತ್ರಿಕೆ ಸೇರಿದಂತೆ ನಿಯತಕಾಲಿಕಗಳ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರ ಜೊತೆಗೆ ಶ್ರೀ ದುರ್ಗಾ ನ್ಯೂಸ್ ಏಜೆನ್ಸಿಯನ್ನು ಮತ್ತು ಕೊಕ್ಕಡಕ್ಕೆ ನಂದಿನಿ ಹಾಲಿನ ಎಲ್ಲ ಉತ್ಪನ್ನಗಳ ಮುಖ್ಯ ವಿತರಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

ಅಲ್ಪಕಾಲದ ಹಿಂದೆ ರಕ್ತ ಹೀನತೆಯ ಸಮಸ್ಯೆಗೊಳಗಾಗಿದ್ದ ಇವರು ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.