ಉಜಿರೆ: ಜಗತ್ತಿಗೆ ಕೊರೊನಾ ಮಹಾಮಾರಿ ವಕ್ಕರಿಸಿ ಜನ ಸಾಯುವ ಭೀತಿಯಲ್ಲಿದ್ದರೆ, ಉಜಿರೆ ಧರ್ಮಸ್ಥಳ ರಸ್ತೆಯ ನೀರಚಿಲುಮೆ ಪ್ರದೇಶದಲ್ಲಿ ಮುಖ್ಯ ರಸ್ತೆಯ ಬಳಿ ವಿದ್ಯುತ್ ವಯರ್ ನ ಮೇಲೆಯೂ ಬೀಳುವ ಸಾಧ್ಯತೆ, ಅಲ್ಲದೆ ರಸ್ತೆ ಮೇಲೆ ಅಥವಾ ಜನರಮೇಲೆ ಬಿದ್ದು ಪ್ರಾಣ ತೆಗೆಯಲು ನಾಲ್ಕು ಅಪಾಯಕಾರಿ ಮರಗಳು ಹಾತೊರೆಯುತ್ತಿದೆ ಎಂದರೆ ತಪ್ಪಲ್ಲ…..
ವರ್ಷದ ಹಿಂದೆ ರುಡ್ ಸೆಟ್ ಬಳಿ ಇದೇ ರೀತಿ ಜೀವಂತ ಮರವೊಂದು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಮೇಲೆ ಏಕಾಏಕಿ ಮುರಿದು ಬಿದ್ದು ಇಬ್ಬರು ಧಾರುಣವಾಗಿ ಮೃತಪಟ್ಟಿರುವುದು ಜನ ಮರೆತಿಲ್ಲ. ಅದೇ ರಸ್ತೆಯ ಸ್ವಲ್ಪ ಮುಂದಕ್ಕೆ ನೀರಚಿಲುಮೆ ಎಂಬಲ್ಲಿ ಇದೀಗ ನಾಲ್ಕು ಜೀವ ಕಳೆದಿಕೊಂಡ ಅಕೇಶಿಯಾ ಮರಗಳು ಜೀವ ಬಲಿ ಪಡೆಯಲು ಕಾಯುತ್ತಿರುವಂತೆ ಭಾಸವಾಗುವ ರೀತಿಯಲ್ಲಿ ಅಪಾಯ. ಅಹ್ವಾನಿಸುತ್ತಿದೆ.
ಈಬಗ್ಗೆ ಗಮನಕೊಡಬೇಕಾದ ಅರಣ್ಯ ಇಲಾಖೆ ಯಾಕೋ ಮೌನವಾಗಿದೆ. ಇನ್ನೊಂದೆಡೆ ವಿದ್ಯುತ್ ವಯರ್ ಗಳ ಮೇಲೆ ವಾಲಿಕೊಂಡಿರುವ ಈ ಮರವನ್ನು ಮೆಸ್ಕಾಂ ಇಲಾಖೆ ಕೂಡ ಯಾಕೆ ಗಮನಿಸಿಲ್ಲ ಎಂಬುದೂ ಚೋದ್ಯವಾಗಿದೆ.
ಈಬಗ್ಗೆ ಕಲ್ಮಂಜ ಗ್ರಾಮದ ಸಾಮಾಜಿಕ ಕಳಕಳಿಇರುವ ರಾಜ್ ಕಿಶನ್ ಅವರು ಸುದ್ದಿಯ ಗಮನಕ್ಕೆ ತಂದಿದ್ದು ಸಂಬಂಧ ಪಟ್ಟ ಇಲಾಖೆಗಳು ಇನ್ನಾದರೂ ಎಚ್ಚೆತ್ತು ಈ ಮರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಕೋರಿದ್ದಾರೆ.