ವಿಶ್ವದಾದ್ಯಂತ ಕೊರೋನ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಈ ಸಂದರ್ಭದಲ್ಲಿ ಒಂದು ಚಿಕ್ಕ ಕಥೆ ನೆನಪಿಗೆ ಬರುತ್ತಾ ಇದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದೇವರ ಪರಮ ಭಕ್ತನೊಬ್ಬ ಪ್ರತಿ ದಿನ ಸಮುದ್ರತೀರದಲ್ಲಿ ಒಬ್ಬೊಬ್ಬನೆ ದೇವರ ಜೊತೆ ಮಾತನಾಡುತ್ತಾ ನಡೆಯುತ್ತಾ ಇರುತ್ತಾನೆ. ತನ್ನ ದಿನ ನಿತ್ಯದ ಆಗುಹೋಗುಗಳನ್ನು ದೇವರ ಹತ್ತಿರ ಮಾತನಾಡುತ್ತಾ ಹಂಚಿಕೊಳ್ಳುವುದು ಆತನ ರೂಢಿ. ಹಾಗೆ ನಡೆಯುತ್ತಾ ಹೋಗುತ್ತಿರುವಾಗ ಸಮುದ್ರ ದಡದ ಮರಳಿನಲ್ಲಿ ತನ್ನ ಹೆಜ್ಜೆ ಗುರುತುಗಳ ಜೊತೆಗೆ ಪಕ್ಕದಲ್ಲೇ ಇನ್ನೊಬ್ಬರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಾಗ ಆತ ಅಕ್ಕ ಪಕ್ಕ ನೋಡುತ್ತಾನೆ..ಯಾರೂ ಕಾಣಿಸದೇ ಇದ್ದಾಗ, ಅದು ದೇವರದೇ ಹೆಜ್ಜೆ ಗುರುತುಗಳು ಎಂದು ಅವನಿಗೆ ಅರಿವಾಗುತ್ತದೆ. ಭಕ್ತನಿಗಂತೂ ದೇವರು ತನ್ನ ಜೊತೆಗಿದ್ದಾನೆಂದು ಖುಷಿಯೋ ಖುಷಿ.

ಒಂದು ದಿನ ಆ ಭಕ್ತನಿಗೆ ದೊಡ್ಡ ಸಂಕಟವೊಂದು ಎದುರಾಗುತ್ತದೆ. ಎಷ್ಟೇ ಯೋಚಿಸಿದರೂ, ಯಾವುದೇ ಪರಿಹಾರ ಕಂಡುಬರದೆ, ಸಮುದ್ರ ತೀರಕ್ಕೆ ಬಂದು ಎಂದಿನಂತೆ ನಡೆದುಕೊಂಡು ಹೋಗುತ್ತಾ ತನ್ನ ಕಷ್ಟಗಳನ್ನು ದೇವರ ಜೊತೆ ಹೇಳಿಕೊಳ್ಳುತ್ತಾನೆ. ಎಷ್ಟು ಹೊತ್ತಾದರೂ ಅವನಿಗೆ ತನ್ನ ಪಕ್ಕದಲ್ಲಿ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುವುದಿಲ್ಲ. ‘ಪ್ರತಿದಿನ ನನ್ನ ಮಾತುಗಳನ್ನು ಕೇಳಿಸಿಕೊಂಡು ನನ್ನ ಜೊತೆಗೆ ಇರುತ್ತಿದ್ದ ದೇವರು ಇವತ್ತು ನಾನು ಕಷ್ಟದಲ್ಲಿರುವಾಗ ನನ್ನೊಂದಿಗಿಲ್ಲವಲ್ಲಾ?!’ ಅಂದುಕೊಂಡು ಅಳುತ್ತಾ ಮನೆಗೆ ತೆರಳುತ್ತಾನೆ.
ಒಂದೆರಡು ದಿನಗಳಲ್ಲಿ ಅವನ ಸಮಸ್ಯೆ ಬಗೆಹರಿದ ಮೇಲೆ ಸಮುದ್ರ ತೀರಕ್ಕೆ ಬಂದು ಮಂಡಿಯೂರಿ, ಆಗಸದತ್ತ ದಿಟ್ಟಿಸಿ, “ದೇವರೇ, ನಾನು ನಿನ್ನನ್ನು ಬಹಳವಾಗಿ ನಂಬಿದ್ದೆ. ಪ್ರತಿ ದಿನ ನಿನ್ನ ಜೊತೆ ಮಾತನಾಡುತ್ತಾ ನಡೆದೆ..ನಿನ್ನ ಹೆಜ್ಜೆ ಗುರುತುಗಳನ್ನು ನೋಡಿ, ನೀನು ಸದಾ ನನ್ನ ಜೊತೆಯೇ ಇರುವೆ ಎಂದು ಭಾವಿಸಿ ಸಂಭ್ರಮಿಸಿದ್ದೆ. ಆದರೆ ನನಗೆ ದೊಡ್ಡ ಕಷ್ಟವೊಂದು ಎದುರಾದಾಗ ನೀನು ನನ್ನ ಜೊತೆಗಿರದೆ ನನ್ನ ಕೈ ಬಿಟ್ಟು ಬಿಟ್ಟೆ.. ಇವತ್ತು ನನ್ನ ಸಮಸ್ಯೆ ಬಗೆಹರಿದಿದೆಯಾದರೂ, ಕಷ್ಟಕಾಲದಲ್ಲಿ ನೀನು ನನ್ನ ಜೊತೆಗಿರಲಿಲ್ಲ ಎಂಬ ದುಃಖ ನನ್ನನ್ನು ಬಹಳವಾಗಿ ಕಾಡುತ್ತಿದೆ.”ಎಂದು ಹೇಳಿ ಕಣ್ಣೀರಿಡುತ್ತಾನೆ.

ಆಗ ಅವನಿಗೆ ಅಶರೀರವಾಣಿಯೊಂದು ಕೇಳಿಸುತ್ತದೆ. ” ಪ್ರತಿ ದಿನ ನೀನು ನನ್ನೊಂದಿಗೆ ಮಾತನಾಡುತ್ತಾ ಇದ್ದಾಗ ನಾನು ನಿನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ನಿನ್ನ ಜೊತೆ ನಡೆಯುತ್ತಿದ್ದೆ. ಆಗ ನಿನಗೆ ನನ್ನ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಮೊನ್ನೆ ನೀನು ಸಂಕಟದಲ್ಲಿದ್ದಾಗ ನಾನು ನಿನ್ನನ್ನು ಹೊತ್ತುಕೊಂಡೇ ನಡೆದೆ. ಆದ್ದರಿಂದ ನಿನಗೆ ಒಂದೇ ಜೋಡಿ ಹೆಜ್ಜೆ ಗುರುತುಗಳು ಮಾತ್ರ ಕಾಣಿಸಿಕೊಂಡವು. ನೀನು ಮೊನ್ನೆ ನೋಡಿದ ಹೆಜ್ಜೆ ಗುರುತುಗಳು ನಿನ್ನದಲ್ಲ, ನನ್ನದು. ನಿನ್ನ ಸಮಸ್ಯೆ ಪರಿಹಾರವಾಗಲು ನಿನಗೆ ದಾರಿ ತೋರಿಸಿದವನೇ ನಾನು. ನನ್ನನ್ನು ನಂಬಿದವರ ಕೈ ಯನ್ನು ನಾನು ಯಾವತ್ತೂ ಬಿಟ್ಟಿಲ್ಲ. ಬಿಡುವುದೂ ಇಲ್ಲ. ನನ್ನ ಮೇಲಿನ ನಂಬಿಕೆ ಬಲವಾದಷ್ಟು ನನ್ನ ಭಕ್ತರಿಗೆ ಸುಖ ಶಾಂತಿ ನೆಮ್ಮದಿಯನ್ನು ನಾನು ಕೊಡುತ್ತಲೇ ಇರುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.”

ಎಷ್ಟು ಸುಂದರವಾದ ಕಥೆ ಇದು. ಈಗ ನಮ್ಮ ಮುಂದೆ ರುದ್ರ ತಾಂಡವವನ್ನು ಆಡುತ್ತಾ ಇರುವ ಕೊರೋನ ವೈರಸ್ ನಿಂದ ಪಾರಾಗುವುದಕ್ಕೆ , ಅದರಿಂದ ಮುಕ್ತಿ ಪಡೆಯುವುದಕ್ಕೆ ದೇವರು ಹಲವಾರು ರೂಪದಲ್ಲಿ, ಸಾಕಷ್ಟು ರೀತಿಗಳಲ್ಲಿ ನಮ್ಮಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾನೆ. ಅವೆಲ್ಲವನ್ನೂ ಅರಿತುಕೊಂಡು, ಅನುಸರಿಸಿಕೊಂಡು ಹೋದರೆ ಖಂಡಿತ ಕೊರೋನ ಮಾರಿಯ ಅಂತ್ಯವನ್ನು ಬಹಳ ಬೇಗವೇ ನಾವು ಕಾಣಬಹುದು. ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಂಡು, ಶುಚಿತ್ವದ ಕಡೆ ಗಮನ ಹರಿಸಿ, ಸಾತ್ವಿಕ ಆಹಾರವನ್ನು ಸೇವಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಮುನ್ನಡೆದರೆ ಯಾವುದೇ ಗಂಭೀರ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಇರಬಹುದು. ‘ ನನಗೆ ಏನೂ ಆಗುವುದಿಲ್ಲ. ನನಗೆ ರೋಗ ನಿರೋಧಕ ಶಕ್ತಿ ಇದೆ.’ಅಂತ ಹೇಳಿಕೊಂಡು ನಿರ್ಲಕ್ಷ ಮಾಡುವವರಲ್ಲಿ ನನ್ನ ಒಂದು ವಿನಂತಿ.

ನಿಮಗೆ ಕೊರೋನದಿಂದ ಯಾವುದೇ ಗಂಭೀರ ಸಮಸ್ಯೆ ಬಾರದೇ ಇರಬಹುದು. ಆದರೆ ಒಂದು ವೇಳೆ ನೀವು ಕೊರೋನ ಸೋಂಕು ಪೀಡಿತರಾದರೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ವ್ಯಕ್ತಿಗಳಿಗೆ ನಿಮ್ಮಿಂದಾಗಿ ಸೋಂಕು ಹರಡಿ,ಅವರ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ನಮ್ಮಿಂದ ಏನೂ ಉಪಕಾರವಾಗದಿದ್ದರೂ, ಇನ್ನೊಬ್ಬರಿಗೆ ನಮ್ಮಿಂದ ತೊಂದರೆ ಮತ್ತು ಅಪಾಯ ಆಗದಿರುವಂತೆ ನೋಡಿಕೊಳ್ಳುವುದು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆ ಅಲ್ವಾ? ಆದಷ್ಟು ಮನೆಯೊಳಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬರುವಲ್ಲಿಯವರೆಗೆ ನಾವೆಲ್ಲರೂ ಸಹಕರಿಸಬೇಕಾಗಿದೆ. ಕೊರೋನ ನಿರ್ಮೂಲನೆಗೆ ಒಗ್ಗಟ್ಟಿನಲ್ಲಿ ಹೋರಾಡಬೇಕಾಗಿದೆ.

ಕೆಲಸದ ಒತ್ತಡದಲ್ಲಿ ನಾವೆಲ್ಲರೂ ಒಟ್ಟಾಗಿ ನಮ್ಮ ಮನೆಯಲ್ಲಿ ನಮ್ಮ ಕುಟುಂಬದವರೊಂದಿಗೆ ಇರಲು ಸಿಗುವ ಅವಕಾಶಗಳೇ ಕಡಿಮೆ. ಈಗಲಾದರೂ ನಮ್ಮ ಮನೆಯವರೊಂದಿಗೆ ಮನೆಯ ಒಳಗಿದ್ದುಕೊಂಡು ಆಪ್ತ ಸಮಯವನ್ನು ಕಳೆಯೋಣ. ಕೊರೋನ ಆಪತ್ತಿನಿಂದ ನಮ್ಮನ್ನು ರಕ್ಷಿಸುವಂತೆ ಸರ್ವಶಕ್ತಿಗಳನ್ನೂ ಮೀರಿಸಿ ನಿಂತ ಆ ಭಗವಂತನಲ್ಲಿ ಪ್ರಾರ್ಥಿಸೋಣ.

ಸುಮಾ ಶ್ರೀನಾಥ್ ಶಿಕ್ಷಕಿ
ಎಸ್.ಡಿ.ಎಂ.ಸಿ.ಬಿ.ಎಸ್.ಇ. ಶಾಲೆ, ಉಜಿರೆ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.