ರಾಜಕೇಸರಿ ಸಂಘಟನೆಯಿಂದ ಜನಜಾಗೃತಿ ಧ್ವನಿ ಪ್ರಚಾರ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಹಾಮಾರಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಧ್ವನಿ ಪ್ರಚಾರ ಅಭಿಯಾನವನ್ನು ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆ ತಾಲೂಕಿನಾಧ್ಯಂತ ನಡೆಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಮಾ.24 ರಂದು  ಈ ಅಭಿಯಾನ ಪ್ರಾರಂಭಿಸಿತು. ಪೊಲೀಸ್ ಇಲಾಖೆ ಮತ್ತು ತಹಶಿಲ್ದಾರರು ಜನಜಾಗೃತಿ ಹಿನ್ನೆಲೆಯಲ್ಲಿ ರಚಿಸಿದ ಧ್ವನಿ ಸುರುಳಿಯನ್ನು ರಾಜಕೇಸರಿ ಸಂಘಟನೆಯು ತಮ್ಮದೇ ಮಾರುತಿ ಓಮ್ನಿ ಕಾರಿನಲ್ಲಿ ಧ್ವನಿ ವರ್ಧಕದ ಮೂಲಕ ತಾಲೂಕಿನ ಗ್ರಾಮ ಗ್ರಾಮಗಳಿಗೆ ಸಂಚರಿಸಿ ಪ್ರಚಾರ ಮಾಡುವ ಕೆಲಸ ಮಾಡಿ ಸಾಮಾಜಿಕ ಬದ್ಧತೆ ಮೆರೆದಿದೆ.

ಬೆಳ್ತಂಗಡಿ ಠಾಣೆಯ ಮುಂಭಾಗದಲ್ಲಿ ಈ ವಾಹನ ಪ್ರಚಾರ ಅಭಿಯಾನಕ್ಕೆ ಎಸ್.ಐ ನಂದ ಕುಮಾರ್, ತಾ| ಪತ್ರಕರ್ತರ ಸಂಘಧ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ, ಪಟ್ಟಣ ಪಂಚಾಯತ್‌ನ ಕರುಣಾಕರ್, ಸಾಮಾಜಿಕ ಸಂಘಟಕರಾದ ಬಿ.ಕೆ ವಸಂತ್ ಮತ್ತು ಶೇಖರ್ ಲಾಲ, ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ಕಾರ್ಯಕರ್ತರಾದ ಶ್ರವಣ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ ಅವರು ಈ ಅಭಿಯಾನದಲ್ಲಿ ಭಾಗಿಯಾಗುವ ಕಾರ್ಯಕರ್ತರಿಗೆ ಅಗತ್ಯ ಬೇಕಾದ ನೀರು ಮತ್ತು ತಿಂಡಿ ಪೊಟ್ಟಣಗಳನ್ನು ಉಚಿತವಾಗಿ ನೀಡಿ ಕಾಳಜಿ ಮೆರೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.