ಬಳಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ನೀರು ಸರಬರಾಜು

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎರಡು ತಿಂಗಳಿಗೆ 15 ಯೂನಿಟ್ ನೀರು

ಬಳಂಜ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮನೆಯಲ್ಲೇ ಇದ್ದು ಸಹಕರಿಸುತ್ತಿರುವ ಬಳಂಜ ನಾಲ್ಕೂರು ಮತ್ತು ತೆಂಕಕಾರಂದೂರು ಗ್ರಾಮಸ್ಥರಿಗೆ ಮುಂದಿನ ಎರಡು ತಿಂಗಳು ಉಚಿತವಾಗಿ ನೀರು ಒದಗಿಸಲಾಗುವುದು ಎಂದು ಬಳಂಜ ಗ್ರಾಮ ಪಂಚಾಯತ್ ತಿಳಿಸಿದೆ.

ಬಳಂಜ ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ತೀರ್ಮಾನದಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 15ಯೂನಿಟ್15,೦೦೦ ಲೀಟರ್) ವರೆಗೆ ಉಚಿತವಾಗಿ ನೀಡಲಾಗುವುದು. ಈ ಉಚಿತ ನೀರನ್ನು ಅನಾವಶ್ಯಕವಾಗಿ ವ್ಯಯಿಸದೆ ನಿಯಮಿತವಾಗಿ ಬಳಸಿ ನೀರನ್ನು ಉಳಿಸಿ ಎಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.