ಅಳದಂಗಡಿಯಲ್ಲಿ ಕೊರೊನಾ ಜಾಗೃತಿ

ಬೆಳ್ತಂಗಡಿ: ಮಹಾ  ಮಾರಿ ಕೊರೊನ ಸಾಂಕ್ರಮಿಕ ರೋಗವು ಈಗ ಎಲ್ಲೆಡೆ ಪಸರಿಸಿದ್ದು ಇದರ ನಿಯಂತ್ರಣಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ ಇವರ ಮಾರ್ಗದರ್ಶನ ಮತ್ತು ಆರಕ್ಷಕ ಠಾಣೆ ವೇಣೂರು ಮತ್ತು ಗ್ರಾಮ ಪಂಚಾಯತ್ ಅಳದಂಗಡಿ ಇವರುಗಳ ಸಹಯೋಗದೊಂದಿಗೆ ಕೊರೋನ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಲು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲು ಮಾ.23 ರಂದು ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಾ. ಆ. ಕೇಂ. ಅಳದಂಗಡಿಯ ವೈಧ್ಯಾಧಿಕಾರಿಯಾದ ಡಾ. ಚೈತ್ರ ಹಾಗೂ ಸಿಬ್ಬಂದಿ ವರ್ಗ , ವೇಣೂರು ಆರಕ್ಷಕ ಠಾಣೆಯ ಎ ಎಸ್ ಐ ಗಿರಿಯಪ್ಪ , ಮತ್ತು ಅಳದಂಗಡಿ ಬೀಟ್ ಪೋಲಿಸ್ ಪ್ರಶಾಂತ್ ಕುಮಾರ್ ಮತ್ತು ಕೃಷ್ಣಯ್ಯ, ವೇಣೂರು ಆರಕ್ಷಕ ಠಾಣೆ ಹಾಗೂ ಹಿಂದು ಯುವಶಕ್ತಿ ಸಮಾಜ ಸೇವಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.