ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಚೇರಿಗಳು ಮಾ.31ರವರೆಗೆ ಬಂದ್

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಚೇರಿಗಳನ್ನು ಮಾ.31 ರವರೆಗೆ ಮುಚ್ಚಲಾಗುವುದು ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.

 

ಈ ಸಮಯದಲ್ಲಿ ಯೋಜನೆಯ ಯಾವುದೇ ವಿಭಾಗವು ಕಾರ್ಯನಿರ್ವಹಿಸಲ್ಲ, ಜೊತೆಗೆ ಯೋಜನೆ ನಿರ್ವಹಿಸುತ್ತಿರುವ ಬ್ಯಾಂಕ್ ಗಳ ಹಣ ಸಂಗ್ರಹಣಾ ಕೇಂದ್ರ ಗಳನ್ನು ಏ.5ರವರೆಗೆ ಸ್ಥಗಿತಗೊಳಿಸಿದ್ದು, ಯಾವುದೇ ಹಣದ ವ್ಯವಹಾರವೂ ನಿರ್ವಹಿಸಲ್ಲ. ಸಂಪೂರ್ಣ ಸುರಕ್ಷೆಯ ರಿನಿವಲ್ ಪೆಂಡಿಂಗ್ ಬಗ್ಗೆ ಮಾ.31 ರಂದು ತೀರ್ಮಾನಿಸಲಾಗುವುದು. ಹೊಸ ಸಂಪೂರ್ಣ ಸುರಕ್ಷಾ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಏ.೩ ರವರೆಗೆ ಎಲ್ಲ ಸ್ವಸಹಾಯ ಸಂಘಗಳ ಸಭೆಗಳು, ನಿರ್ಣಯಗಳು, ಕಾರ್ಯಕ್ರಮಗಳು ಸ್ಥಗಿತಗೊಳಿಸಿ ಮುಂದಿನ ಎರಡು ವಾರಗಳ ಕಾಲ ಸಂಘದ ಸದಸ್ಯರುಗಳಿಗೆ ಮರುಪಾವತಿ ರಜೆ ಘೋಷಿಸಲಾಗಿದೆ ಹಾಗೂ ವೇತನ ವ್ಯವಸ್ಥೆಯನ್ನು ಏಪ್ರಿಲ್‌ ಮೊದಲ ವಾರ ಮಾಡಲಾಗುವುದು ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.