ಪುದುವೆಟ್ಟು ಬಳಿ 20ಕ್ಕೂ ಹೆಚ್ಚು ಗೋಣಿಚೀಲಗಳಲ್ಲಿ ಸತ್ತ ಕೋಳಿಗಳು ಪತ್ತೆ

Advt_NewsUnder_1
Advt_NewsUnder_1
Advt_NewsUnder_1

ಪದವು ರಸ್ತೆ ಬದಿಯಲ್ಲಿ ದುರ್ವಾಸನೆಯಿಂದ ಸ್ಥಳೀಯರಿಗೆ ತೊಂದರೆ

ಬೆಳ್ತಂಗಡಿ: ಪುದುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದವು ಎಂಬಲ್ಲಿ ಸುಮಾರು 20ಕ್ಕೂ ಹೆಚ್ಚು ಗೋಣಿಚೀಲಗಳಲ್ಲಿ ಕೋಳಿಗಳನ್ನು ಪೊದೆಗೆ ಎಸೆದಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.
ಧರ್ಮಸ್ಥಳ-ಬೈಲಂಗಡಿ ಮುಖ್ಯರಸ್ತೆಯ ಕ್ರಾಸ್ ರಸ್ತೆಯ ಪುದುವೆಟ್ಟು, ಬೆಳ್ಮನಾರು ಪ್ರದೇಶಕ್ಕೆ ಹೋಗುವ ಪದವು ಎಂಬಲ್ಲಿ ಸತ್ತಿರುವ ಕೋಳಿಗಳನ್ನು ಗೋಣಿಚೀಲದಲ್ಲಿ ಕಟ್ಟಿ ಬೇರೆಡೆಯಿಂದ ತಂದು ಅಪರಿಚಿತರು ಇಲ್ಲಿ ಎಸೆದು ಹೋಗಿದ್ದಾರೆ. ಇದರಿಂದ ಸುತ್ತಮುತ್ತಲಿನ ಜನರಿಗೆ ದುರ್ವಾಸನೆಯಿಂದ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಹಾಮಾರಿಯಾದ ಕೊರೊನಾ ವೈರಸ್ ಆತಂಕದಿಂದ ಅಥವಾ ಹಕ್ಕಿಜ್ವರದ ಭಯದಿಂದ ಇಷ್ಟು ಪ್ರಮಾಣದ ಕೋಳಿಗಳನ್ನು ಇಲ್ಲಿಯ ಪೊದೆಯಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.