ಲಾಕ್‍ಡೌನ್, ನಿಷೇಧಾಜ್ಞೆವಿದ್ದರೂ ಕ್ಯಾರೇ ಎನ್ನದ ಬೆಳ್ತಂಗಡಿ ಜನತೆ!

* ರಸ್ತೆಗಳಲ್ಲಿ ವಾಹನಗಳ ದಟ್ಟಣೆ, ಟ್ರಾಫಿಕ್ ಜಾಮ್
* ಶಾಸಕ ಹರೀಶ್ ಪೂಂಜರಿಂದ ಸಹಕರಿಸಲು ಮನವಿ

ಬೆಳ್ತಂಗಡಿ: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರಕಾರದ ಆದೇಶದ ಮೇರೆಗೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಲಾಕ್‍ಡೌನ್, ನಿಷೇಧಾಜ್ಞೆಗೆ ಜಿಲ್ಲಾಡಳಿತದ ಆದೇಶವಿದ್ದರೂ ಬೆಳ್ತಂಗಡಿ ಪಟ್ಟಣದಲ್ಲಿ ಜನರ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

ಕೊರೊನಾ ಸೋಂಕು ಹರಡದಿರಲಿ ಎಂಬ ದೃಷ್ಟಿಯಿಂದ ಮಾ.23ರಿಂದ ಮಾ.31ರವರೆಗೆ ದಕ್ಷಿಣಕನ್ನಡ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶದ ಜತೆಗೆ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಯ ಆದೇಶವಿದ್ದರೂ ಬೆಳ್ತಂಗಡಿಯ ಸಾರ್ವಜನಿಕರು ಈ ಆದೇಶಕ್ಕೆ ವಾಹನಗಳಲ್ಲಿ ಓಡಾಟ ನಡೆಸುವ ಮೂಲಕ ಸೂಚನೆಯನ್ನು ಪಾಲಿಸದಿರುವುದು ವಿಪರ್ಯಾಸವಾಗಿದೆ.


ಸೋಮವಾರದಂದು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಓಡಾಟವೂ ಅಧಿಕವಾಗಿತ್ತು. ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಆತುರದಿಂದ ಖರೀದಿ ಮಾಡಿ ಮನೆಯಲ್ಲಿ ಸಂಗ್ರಹಿಸುವ ಅವಶ್ಯವಿಲ್ಲ. ಅಗತ್ಯ ವಸ್ತುಗಳ ಅಂಗಡಿಗಳು ಮಾ.31ರವರೆಗೂ ತೆರದಿರಲಿವೆ ಅಲ್ಲದೇ ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶದಲ್ಲಿ ಹೇಳಿದ್ದರೂ ಪಾಲಿಸುತ್ತಿಲ್ಲ ಎಂಬುದು ದೃಶ್ಯಗಳಲ್ಲಿ ಕಾಣುತ್ತಿದೆ.

ಶಾಸಕ ಹರೀಶ್ ಪೂಂಜರಿಂದ ಮನವಿ:

“ಬೆಳ್ತಂಗಡಿಯ ನನ್ನ ಬಂಧುಗಳೇ ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬನ್ನಿ ಜೀವನಾವಶ್ಯಕ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಮುಚ್ಚಿ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಾಲೂಕು ಆಡಳಿತದ ಜೊತೆ ದಯವಿಟ್ಟು ಸಹಕರಿಸಿ” ಎಂದು ಶಾಸಕರಾದ ಹರೀಶ್ ಪೂಂಜ ಅವರು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ.

ಪಟ್ಟಣ ಪಂಚಾಯತ್‌ನಿಂದ ಬಂದ್‌ಗೆ ಸೂಚನೆ :
ಲಾಕ್‌ಡೌನ್, ನಿಷೇಧಾಜ್ಞೆ ಆದೇಶವಿದ್ದರೂ ಪಟ್ಟಣದಲ್ಲಿ ವ್ಯಾಪಾರ- ವಹಿವಾಟು ನಡೆಸಲು ತೆರೆದಿದ್ದ ಅಂಗಡಿಗಳನ್ನು ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್, ಮಹಾವೀರ ಆರಿಗ ಹಾಗೂ ಸಿಬ್ಬಂದಿಗಳು ಅಂಗಡಿ ಮಾಲೀಕರಿಗೆ ಮುಚ್ಚವಂತೆ ಸೂಚಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.