HomePage_Banner_
HomePage_Banner_
HomePage_Banner_

ಮಂಗಳೂರಿನಲ್ಲಿ ಓರ್ವನಿಗೆ ಕೊರೋನಾ ಸೋಂಕು ದೃಢ

ಮಂಗಳೂರು :ದುಬೈ ನಿಂದ  ಮಂಗಳೂರಿಗೆ ಮಾ. 19ರಂದು ಬಂದ ವ್ಯಕ್ತಿಯಲ್ಲಿ (22ವ) ಕೊರೋನಾ ವೈರಸ್ ದೃಢಪಟ್ಟಿದ್ದು ಇದೀಗ ಅವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರನ್ನು ಮೂಲತ ಭಟ್ಕಳ ಮೂಲದವರೆಂದು ಗುರುತಿಸಲಾಗಿದೆ

ಮಂಗಳೂರಿನಿಂದ ಬಂದ ಕೂಡಲೇ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.ಇಂದು ಅದರ ರಿಪೋರ್ಟ್ ಬಂದಿದ್ದು ಅದು ‘ ಪಾಸಿಟಿವ್ ‘ ಎಂದಿದೆ. ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆತನ ಜತೆ 165 ಜನ ಜತೆಯಾಗಿ ಪ್ರಯಾಣಿಸಿದ್ದರು. ಈಗ ಅವರ ಸೇಫ್ಟಿಯ ಬಗ್ಗೆಯೂ ಗಮನ ಹರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.