ಕಾಜೂರು ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ: ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ

Advt_NewsUnder_1
Advt_NewsUnder_1


ಮಿತ್ತಬಾಗಿಲು: ಇತಿಹಾಸ ಪ್ರಸಿದ್ಧ ಮತೀಯ ಸೌಹಾರ್ದ ಕ್ಷೇತ್ರ ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್‌ನ ಆಡಳಿತ ವ್ಯಾಪ್ತಿಯಲ್ಲಿ ಭವಿಷ್ಯದ ಸುಂದರ ದಿನಗಳಿಗಾಗಿ, ಗಣ್ಯರ ಸಲಹೆ ಮೇರೆಗೆ ಶೈಕ್ಷಣಿಕ ವಲಯ ವಿಸ್ತರಣೆಗೆ ನಿರ್ಧರಿಸಲಾಗಿದ್ದು ಆ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರು ಮತ್ತು ಅನುಭವಿಗಳ ಜೊತೆ ಪ್ರಥಮ ಸುತ್ತಿನ ಸಮಾಲೋಚನಾ ಸಭೆ ಮಾ.21 ರಂದು ಕಾಜೂರಿನಲ್ಲಿ ನಡೆಯಿತು.

ಶಿಕ್ಷಣ ತಜ್ಞರು, ಡಾಕ್ಟರೇಟ್ ಪುರಸ್ಕೃತರೂ ಆಗಿರುವ ಡಾ. ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ, ಜಿ.ಎಮ್ ಮುಹಮ್ಮದ್ ಕಾಮಿಲ್ ಸಖಾಫಿ, ಇಕ್ಬಾಲ್ ಮಾಸ್ಟರ್ ಮಾಚಾರು ಮತ್ತು ಅಶ್ರಫ್ ಮಾಸ್ಟರ್ ಮಿತ್ತೂರು ಇವರು ಪ್ರಧಾನ ಸಂಪನ್ಮೂಲ ಮಾಹಿತಿ ನೀಡಿದರು.
ಮುಂದಕ್ಕೆ ಕಾಜೂರಿನಲ್ಲಿ ಈಗ ಇರುವ ಪ್ರೌಢ ಶಾಲೆ ಮತ್ತು ಇಸ್ಲಾಮಿಕ್ ದಅವಾ ಶಿಕ್ಷಣದ ದರ್ಸ್ ವ್ಯವಸ್ಥೆ ವಿಸ್ತರಣೆ, ಮಹಿಳಾ ಶರೀಅತ್ ಕಾಲೇಜು ಸ್ಥಾಪನೆ, ಯುವಕ-ಯುವತಿಯರಿಗೆ ಪ್ರತ್ಯೇಕ ಪಿಯುಸಿ ಶಿಕ್ಷಣ ಸಂಸ್ಥೆ ತೆರೆಯುವುದು, ಭವಿಷ್ಯದಲ್ಲಿ ಹಿಫ್ಲುಲ್ ಕುರ್‌ಆನ್ ಕಾಲೇಜು ತೆರೆಯುವುದು ಇತ್ಯಾಧಿ ಪ್ರಮುಖ ವಿಚಾರಗಳ ಬಗ್ಗೆ ವಿಚಾರ ವಿಮರ್ಷೆ ನಡೆಯಿತು.

ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ನಿರ್ದೇಶಕರುಗಳಾದ ಎ.ಯು ಮುಹಮ್ಮದಾಲಿ, ಎನ್.ಎನ್ ಯಾಕೂಬ್, ಬದ್ರುದ್ದೀನ್, ಅಬ್ಬಾಸ್, ಸಿದ್ದೀಕ್ ಕೆ.ಹೆಚ್, ಉಮರ್‌ಕುಂಞಿ ಮತ್ತು ಅಬ್ದುಲ್ ಖಾದರ್, ಮುಂದಾಳುಗಳಾದ ಪಿ.ಎ ಇಬ್ರಾಹಿಂ ಮದನಿ, ಕೆ.ಎಮ್ ಉಮರ್ ಸಖಾಫಿ, ಕೆ.ಯು ಮುಹಮ್ಮದ್ ಸಖಾಫಿ, ಕೆ.ಎಮ್ ಅಬೂಬಕ್ಕರ್ ಕುಕ್ಕಾವು, ಕೆ.ಪಿ ಉಸ್ಮಾನ್ ಕುಕ್ಕಾವು, ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ, ಕೆ.ಪಿ ಮುಹಮ್ಮದ್ ಗೌಸಿಯಾನಗರ, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.