HomePage_Banner_
HomePage_Banner_
HomePage_Banner_

ಮೈಸೂರಿನಲ್ಲಿ ನೆಲೆಸಿದ್ದ ಮಿತ್ತಬಾಗಿಲಿನ ಗಂಗಾಧರ ಫಡಕೆ ನಿಧನ

ಬೆಳ್ತಂಗಡಿ ಮೂಲದ, ಮೈಸೂರಿನಲ್ಲಿ ನೆಲೆಸಿರುವ ಗಂಗಾಧರ ಫಡ್ಕೆ ಅವರು ಶನಿವಾರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಅವರು ಕೆಲಕಾಲದಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಪತ್ನಿ ಉಮಾ ಜಿ. ಫಡ್ಕೆ, ಪುತ್ರ ಹೋಟೇಲ್ ಉದ್ಯಮಿ ದಿವಾಕರ ಫಡ್ಕೆ, ಪುತ್ರಿಯರಾದ ಡಾ. ಕೃಪಾ ಫಡ್ಕೆ, ಡಾ. ದೀಪಾ ಫಡ್ಕೆ , ರೂಪಾ ಮರಾಠೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೃಷಿಕರಾಗಿದ್ದ ಗಂಗಾಧರ ಫಡ್ಕೆ ಅವರು ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಾರ‌್ಯದರ್ಶಿಯಾಗಿ ಕಾರ‌್ಯನಿರ್ವಹಿದ್ದರು‌. ಬೆಳ್ತಂಗಡಿಯಲ್ಲಿ ಕೆಲ ವರ್ಷ ಹೋಟೇಲು ಕೂಡಾ ನಡೆಸಿದ್ದರು. ಅನಂತರ ಮೈಸೂರಿನಲ್ಲಿ ವಾಸವಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.