ಸೌತಡ್ಕ ಘಂಟೆ ಏಲಂ ಪ್ರಕ್ರಿಯೆ ಪಾರದರ್ಶಕ; ಕಾನತ್ತೂರು ಕ್ಷೇತ್ರದಲ್ಲಿ ಸತ್ಯ ಪ್ರಮಾಣ: ವ್ಯವಸ್ಥಾಪನಾ ಸಮಿತಿ ಮಾಧ್ಯಮ ಗೋಷ್ಠಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹರಿಕೆ ಘಂಟೆಗಳ ಮಾರಾಟ ಪ್ರಕ್ರಿಯೆಯಲ್ಲಿ 1 ಕೋಟಿ ರೂ.ಗಳಿಗೂ ಮಿಕ್ಕಿದ ಅವ್ಯವಹಾರ ನಡೆದಿದೆ ಎಂದು ಶಾಸಕ ಹರೀಶ್ ಪೂಂಜ ವಿಧಾನ ಮಂಡಲದ ಅಧಿವೇಶನದಲ್ಲಿ ಆರೋಪಿಸಿರುವುದು ಸಂಪೂರ್ಣ ನಿರಾಧಾರವಾಗಿದ್ದು, ಕಳೆದ 3 ವರ್ಷಗಳಿಂದ ಅಧಿಕಾರದಲ್ಲಿರುವ ನಮ್ಮ ಸಮಿತಿಯ ಕೆಲವು ಕಟ್ಟುನಿಟ್ಟಿನ ನಿರ್ಧಾರಗಳಿಂದ ಕಂಗೆಟ್ಟಿರುವ ನಮ್ಮ ರಾಜಕೀಯ ವಿರೋಧಿಗಳು ಈ ರೀತಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ನಾವು ಕಾನತ್ತೂರು ಕ್ಷೇತ್ರದಲ್ಲಿ ಸತ್ಯಪ್ರಮಾಣ ಮಾಡಿದ್ದು ಮುಂದಿನ ಮೇ. 20 ರಂದು ಎದುರುದಾರರು ಬಂದು ನಮ್ಮ ಎದುರು ಪ್ರಮಾಣ ಮಾಡಲಿ. ಅಲ್ಲದೆ ಇನ್ಯಾವುದೇ ಕ್ಷೇತ್ರಕ್ಕೆ ಆಹ್ವಾನಿಸಿದರೂ ನಾವು ಅದಕ್ಕೆ ಸಿದ್ದ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಹೇಳಿದ್ದಾರೆ.

ಶಾಸಕರ ಆರೋಪದ ಬಗ್ಗೆ ಮಾ. 21 ರಂದು ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ವಿವರಣೆ ನೀಡಿದರು.

ಶಾಸಕರು ಮಾಹಿತಿ ಕೊರತೆಯಿಂದ ವಿಧಾನ ಸಭೆಯಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈಗಾಗಲೇ ನಮ್ಮ ಕಡೆಯಿಂದ ಮುಜರಾಯಿ ಇಲಾಖೆ ಆಯುಕ್ತರ ಕಚೇರಿಗೆ ದಾಖಲೆ ಮತ್ತು ಕಡತಗಳನ್ನು ನೀಡಲಾಗಿದೆ. ದೇವಸ್ಥಾನಕ್ಕೆ ಬಂದ ಘಂಟೆಗಳು ದಾಸ್ತಾನಿನಲ್ಲಿ ತುಂಬಿದಾಗ ಹರಾಜಿನ ಮೂಲಕ ವಿಕ್ರಯಿಸುವ ಪದ್ಧತಿಯನ್ನು ಸರಕಾರದ ಅನುಮತಿ ಪಡೆದು ನಮ್ಮ ಆಡಳಿತಾವಧಿ ಮೂರು ವರ್ಷಗಳಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ. ಕಿಲೋ ಒಂದಕ್ಕೆ 318 ರಂತೆ ಇಳಂತಿಲದ ವ್ಯಾಪಾರಿಯೊರ್ವರು ಖರೀದಿಸಿದ್ದು 12 ಟನ್ ಘಂಟೆಗಳನ್ನು ದೇವಸ್ಥಾನದ ಖಾತೆಗೆ ಹಣ ಪಾವತಿಸಿ ಪಡೆದುಕೊಂಡಿದ್ದಾರೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಟ್ಟು ಹರಾಜುಗೊಂಡಿರುವುದೇ 38 ಲಕ್ಷ ರೂಪಾಯಿಗಳಿಗೆ ಆಗಿರುವಾಗ 1 ಕೋಟಿಗೂ ಮಿಕ್ಕಿದ ಅವ್ಯವಹಾರ ನಡೆದಿದೆ ಎಂದು ಶಾಸಕರು ಆರೋಪಿಸಿರುವುದು ಹಾಸ್ಯಾಸ್ಪದವಾಗಿದೆ. ಈ ರೀತಿ ಸುಳ್ಳು ಆಯೋಪಗಳನ್ನು ಹೊರಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ ನಮ್ಮ ತೇಜೋವಧೆ ಮಾಡಲು ನಮ್ಮ ರಾಜಕೀಯ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ ಎಂದರು.|

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ, ಅಣ್ಣಪ್ಪ ಗೌಡ ಕಾಶಿ, ಪ್ರಶಾಂತ್ ರೈ ಅರಂತಬೈಲು ಮತ್ತು ಗಣೇಶ್ ಪಿ.ಕೆ ಉಪಸ್ಥಿತರಿದ್ದರು.

ಬಿಚ್ಚಿಕೊಂಡ ಟ್ರಸ್ಟ್ ಕಥೆ!
ಘಟನೆಯ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ವ್ಯವಸ್ಥಾಪನಾ ಮಂಡಳಿಯ ಪತ್ರಿಕಾ ಹೇಳಿಕೆಯಲ್ಲಿ ದೇವಸ್ಥಾನ ಮತ್ತು ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಡುವೆ ಟ್ರಸ್ಟ್ ಒಳಜಗಳ ಮತ್ತು ಹೋರಾಟದ ವಿಚಾರ ಬಹಿರಂಗಗೊಂಡಿದೆ.

10 ವರ್ಷಗಳ ಹಿಂದೆ ದೇವಸ್ಥಾನದ ಅಭಿವೃದ್ಧಿಯ ದೂರದೃಷ್ಟಿಯಿಂದ ವಾಸುದೇವ ಶಬರಾಯ, ಕೆ ರಾಘವ ಕೊಲ್ಲಾಜೆ ಮತ್ತು ವಿಶ್ವನಾಥ ಕೊಲ್ಲಾಜೆ ಈ ಮೂವರು ತಮ್ಮ ಹೆಸರಿನಲ್ಲಿ ಜಮೀನನ್ನು ಕೊಕ್ಕಡ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಡವಿರಿಸಿ ರೂ. ಮೂರು ಲಕ್ಷ ಸಾಲ ಪಡೆದು ಆ ಹಣವನ್ನು ದೇವಸ್ಥಾನಕ್ಕಾಗಿ ಜಮೀನು ಖರೀದಿ ಮಾಡಿದ್ದರು. ಈ ಸಾಲ ಮರು ಸಂದಾಯಕ್ಕಾಗಿ ದೇವಳದಲ್ಲಿ ದುಡ್ಡು ಎಣಿಕೆ ದಿನ ಸ್ವಲ್ಪ ದುಡ್ಡು ಎತ್ತಿಟ್ಟು ಸಾಲ ಸಂದಾಯ ಮಾಡಿ ದೇವಳದ ಹೆಸರಿನಲ್ಲಿ ಜಮೀನು ಮಾಡಿಸಲು ಮುಂದಾದಾಗ, ಕೃಷಿ ಭೂಮಿಯನ್ನು ನೊಂದಾವಣೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದನ್ನು ತಿಳಿದು ಕೆಲವಾರು ಮಂದಿ ಒಮ್ಮತದ ತೀರ್ಮಾನ ಕೈಗೊಂಡು ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸ್ಥಾಪಿಸಿ, ಸದ್ರಿ ಜಾಗದಲ್ಲಿ ಕಟ್ಟಿಸಿದ ಕಟ್ಟಡದ ನಿರ್ವಹಣೆಯನ್ನು ದೇವಳದ ಆಡಳಿತಕ್ಕೆ ಪೂರಕವಾಗಿ ನಡೆಸಲು ತೀರ್ಮಾನಿಸಿದ್ದರು. ಈ ಪೈಕಿ ವಾಸುದೇವ ಶಬರಾಯರು ನಿಧನಹೊಂದಿದಾಗ, ಪೂರ್ವದಲ್ಲೇ ವಿಲುನಾಮೆ ಯಾನೆ ಮರಣಶಾಸನ ಮಾಡಿದ್ದಂತೆ ಅವರ ಹೆಸರನಿಲ್ಲಿದ್ದ ಭೂಮಿ ಟ್ರಸ್ಟ್ ಹೆಸರಿಗೆ ವರ್ಗಾವಣೆಗೊಂಡಿದ್ದು, ಉಳಿದಿಬ್ಬರು ಗಿಫ್ಟ್ ಡೀಡ್ ಮೂಲಕ ದೇವಳಕ್ಕೆ ನೀಡಲು ಡಿಸಿ ಅವರಿಂದ ಅನುಮತಿ ಬಂದಿದ್ದು ಪ್ರಕ್ರಿಯೆ ಚಾಲನೆಯಲ್ಲಿದೆ. ಇದರಲ್ಲಿ ಭಕ್ತಾದಿಗಳು ನೀಡಿದ ಹಣದಿಂದ ಕಟ್ಟಿದ ವಸತಿಗೃಹ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡದಿಂದ ವರ್ಷಕ್ಕೆ 15 ಲಕ್ಷ ರೂ. ಬಾಡಿಗೆ ಅದಾಯ ಬರುತ್ತಿದೆ. ಇದರಲ್ಲಿ ದೇವಳದ ಬಂಡಾರಕ್ಕೆ ಒಂದು ಪೈಸೆಯೂ ಬಂದಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ಇದೀಗ ಇದರ ಮುಂಭಾಗದಲ್ಲೇ ಹರಿಕೆ ಘಂಟೆಗಳನ್ನು ಮಾರುವ ಮಳಿಗೆ ದೇವಸ್ಥಾನದ ಕಡೆಯಿಂದ ತೆರೆಯಲಾಗಿದ್ದು ವರ್ಷಕ್ಕೆ 8 ಲಕ್ಷ ರೂ ಆದಾಯ ಬರುತ್ತಿದ್ದು, ಟ್ರಸ್ಟ್‌ನ ಆದಾಯ ಕಡಿಮೆಯಾಗಿದೆ. ಇದರಿಂದ ಒಂದು ಗುಂಪು ವ್ಯವಸ್ಥಾಪನಾ ಮಂಡಳಿ ವಿರುದ್ಧ ಶಾಸಕರಿಗೆ ತಪ್ಪು ಮಾಹಿತಿ ನೀಡಿ ರಾಜಕೀಯ ಮಾಡಿದೆ ಎಂದು ಆಪಾದಿಸಲಾಗಿದೆ.

ಒಟ್ಟಾರೆಯಾಗಿ ಶಾಸಕರ ಆರೋಪ, ಸಮಿತಿಯವರ ಸ್ಪಷ್ಟೀಕರಣದ ಮಧ್ಯೆ ಚರ್ಚೆ ಇನ್ನೊಂದು ಮಗ್ಗುಲು ಪಡೆದುಕೊಂಡಿದ್ದು, ಎಲ್ಲಿಗೆ ಹೋಗಿ ಮುಟ್ಟಲಿದೆ ಎಂದು ಕಾದು ನೋಡುವ ಸ್ಥಿತಿ ನಿರ್ಮಾಣವಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.