ಮರಳು ಲಾರಿಗಳ ಅವಾಂತರದ ವಿರುದ್ದ ಮುಂಡಾಜೆಯಲ್ಲಿ ಸಿಡಿದ ಜನಾಕ್ರೋಶ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಕಲ್ಮಂಜ-ಮುಂಡಾಜೆ ಗ್ರಾ.ಪಂ ನ ಗಡಿಭಾಗವಾದ ಮೂಲಾರು ಎಂಬಲ್ಲಿ ಮತ್ತು ಬಲ್ಯಾರ್‌ಕಾಪು ಮೃತ್ಯುಂಜಯ ನದಿಯಲ್ಲಿ ಅವ್ಯಾಹತವಾಗಿ ಮರಳುಗಾರಿಗೆ ನಡೆಯುತ್ತಿದ್ದು ಇದರಿಂದ ಆಗುತ್ತಿರುವ ತೀವ್ರ ತೊಂದರೆಯಿಂದ ಮಹಿಳೆಯರೂ ಸೇರಿದಂತೆ ಊರವರು ಮಾ.20 ರಂದು ಮರಳು ಸಾಗಾಟ ಲಾರಿಗಳನ್ನು ತಡೆದ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ನದಿ ಪಾತ್ರದ ಪ್ರದೇಶದಲ್ಲಿ ಕಳೆದ ಬಾರಿಯ ಭಾರೀ ಪ್ರವಾಹ ನೀರು ಕೃಷಿ ತೋಟದೊಳಗೆ ತಂದುಹಾಕಿರುವ ಭಾರೀ ಪ್ರಮಾಣದ ಮರಳು ಮಿಶ್ರಿತ ಮಣ್ಣು ಮತ್ತು ತ್ಯಾಜ್ಯಗಳನ್ನು ತೆರವುಗೊಳಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆದುಕೊಂಡಿರುವ ಅನುಮತಿಯನ್ನು ದುರುಪಯೋಗಪಡಿಸಿಕೊಂಡು ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಭಾರೀ ಆಕ್ರೋಶ ಮನೆಮಾಡಿತ್ತು.

ತೋಟದ ಮರಳು ತೆಗೆಯುವ ಬದಲು ತೋಟದ ಮೂಲಕ ರಸ್ತೆ ನಿರ್ಮಿಸಿ ಮೃತ್ಯುಂಜಯ ನದಿಯಿಂದ ಮರಳು ಸಾಗಾಟ ಮಾಡಲಾಗುತ್ತಿದೆ. ಒಳ ರಸ್ತೆಗಳಲ್ಲಿ ಮರಳು ಲಾರಿಗಳು ಅಪಾಯಕಾರಿ ವೇಗದಿಂದ ಚಲಾಯಿಸುತ್ತಿರುವುದರಿಂದ ಊರವರಿಗೆ, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಈ ಪ್ರದೇಶದ ನಿವಾಸಿಗಳು ಮರಳು ಲಾರಿಗಳನ್ನು ತಡೆದು ಪ್ರತಿಭಟನೆ ಹೊರಹಾಕಿದರು.

ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳದ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಪ್ರವೀಣ್ ಕೆ.ಎಸ್ ಅವರು ಜನರಿಗೆ ಮನವರಿಕೆ ಮಾಡಿ ಒಂದು ದಿನದ ಮಟ್ಟಿಗೆ ಮರಳು ಲಾರಿಗಳ ಸಂಚಾರ ನಿಲ್ಲಿಸಿ, ಈ ಬಗ್ಗೆ ಭೂ ವಿಜ್ಞಾನ ಹಾಗೂ ಗಣಿ ಇಲಾಖೆ ಹಾಗೂ ಬೆಳ್ತಂಗಡಿ ತಹಶಿಲ್ದಾರರಿಗೆ ವರದಿ ನೀಡುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.