ಕೊರೊನಾ ಭೀತಿ​​: ಧರ್ಮಸ್ಥಳ ಡಿಪೋದಿಂದ ಹೊರಡುವ ಬಸ್​ಗಳ ಮೇಲೆ ತೀವ್ರ ನಿಗಾ

ಬೆಳ್ತಂಗಡಿ: ಧರ್ಮಸ್ಥಳ ಡಿಪೋ ಹೊಸ ಬಸ್​ ನಿಲ್ದಾಣದಿಂದ 200 ಬಸ್​ ಪ್ರತೀ ದಿನ ವಿವಿಧ ಊರುಗಳಿಗೆ ಸಂಚಾರ ಮಾಡುತ್ತಿದ್ದು, ಇದೀಗ ಕೊರೊನಾ ವೈರಸ್​ನ ಆತಂಕದಿಂದ ಇವುಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.ಮಾರ್ಚ್ 19 ರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ 150 ಬಸ್​ಗಳು ಮಾತ್ರ ಸಂಚಾರ ಮಾಡುತ್ತಿವೆ.

ಅದೇ ರೀತಿ ಹಳೇ ಬಸ್​ ನಿಲ್ದಾಣದಿಂದ ಮಂಗಳೂರು, ಪುತ್ತೂರು, ಸುಬ್ರಹ್ಮಣ್ಯ, ಮಡಿಕೇರಿ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ 320 ಟ್ರಿಪ್ ಮಾಡುತ್ತಿದ್ದು, ಅದನ್ನು ಈಗ 250 ಟ್ರಿಪ್​ಗೆ ಕಡಿತಗೊಳಿಸಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಿಗೆ ರಾತ್ರಿ ಪ್ರಯಾಣಿಸುವ ಶೇಕಡಾ 50% ಬಸ್​ಗಳ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಿನ ರಾಜಹಂಸ, ವೊಲ್ವೋ, ಸ್ಲೀಪರ್ ಕೋಚ್​ಗಳ ಪ್ರಯಾಣವನ್ನು ನಿಲ್ಲಿಸಲಾಗಿದೆ.ಬೆಳ್ತಂಗಡಿಯಿಂದ ಬೆಂಗಳೂರಿಗೆ ಒಂದು ಸ್ಲೀಪರ್ ಬಸ್​ನ್ನು​ ಮಾತ್ರ ಕಾಯ್ದಿರಿಸಲಾಗಿದೆ.

ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಬಸ್​ನ ಚಾಲಕರಿಗೆ, ನಿರ್ವಾಹಕರಿಗೆ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್​ಗಳನ್ನು ವಿತರಿಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಇನ್ನು ಡಿಪೋಗೆ ಆಗಮಿಸುವ ಮತ್ತು ಡಿಪೋದಿಂದ ಹೊರಡುವಾಗ ಪ್ರತಿ ಬಸ್​ಗೂ ಸ್ಪ್ರೇ ಮಾಡಲಾಗುತ್ತಿದೆ. ಪ್ರತಿ ದಿನ ಬಸ್​ಗಳನ್ನು ಸ್ವಚ್ಚ ಗೊಳಿಸಲಾಗುತ್ತಿದೆ ಎಂದು ಧರ್ಮಸ್ಥಳ ಡಿಪೋ ಮ್ಯಾನೇಜರ್ ಶಿವರಾಮ ನಾಯ್ಕ ತಿಳಿಸಿದರು.ಅದೇ ರೀತಿ ಸಿಬ್ಬಂದಿ ಮೇಲ್ವಿಚಾರಕರಾದ ಜನಾರ್ಧನ್, ತಾಂತ್ರಿಕ ಮೇಲ್ವಿಚಾರಕರಾದ ವೆಂಕಟರಮಣ ಶೆಟ್ಟಿ ಮತ್ತು ಚಾಲಕ ಬೋದಕರಾದ ರಾಜ ಸಿಬ್ಬಂದಿಗಳ ಸುರಕ್ಷತೆಯ ಸ್ವಚ್ಛತೆಯ ಬಗ್ಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.