HomePage_Banner_
HomePage_Banner_
HomePage_Banner_

ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸಭೆ

ಬೆಳ್ತಂಗಡಿ ಮಾ:19 ತಾಲೂಕು ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಇದರ ವಿಶೇಷ ಸಭೆಯು ದಿನಾಂಕ 19 ಗುರುವಾರ ಸಮಯ ಬೆಳಿಗ್ಗೆ 11:00 ಕ್ಕೆ ಜೆಎಂಎಫ್ ಸಭಾ ಭವನದಲ್ಲಿ ಬಿಎ,ನಝೀರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ NPR ಬಗ್ಗೆ ಚರ್ಚಿಸಿ ಎಪ್ರಿಲ್ 15 ರಿಂದ ಮೇ ತಿಂಗಳ 29 ರ ವರೆಗೆ ನಡೆಯುವ NPR ಬಗ್ಗೆ ಅಧಿಕಾರಿಗಳು ಮಾಹಿತಿ ಕೇಳಿಕೊಂಡು ಮನೆ ಮನೆಗೆ ಬೇಟಿ ನೀಡಿದ ಆ ಸಂಧರ್ಭದಲ್ಲಿ NPR ಗೆ ಯಾವುದೇ ಮಾಹಿತಿ ನೀಡದಂತೆ ತಾಲೂಕಿನ ಪ್ರತಿ ಮಸೀದಿಯ ಜಮಾತ್ ಕಮಿಟಿ ಮೂಲಕ ಜಮಾತರಲ್ಲಿ ಜಾಗ್ರತಿಯನ್ನು ಮೂಡಿಸುವಂತೆ ಕೇಳಿಕೊಳ್ಳುವುದೆಂದು ತೀರ್ಮಾನಿಸಲಾಯಿತು.

NPR ಮತ್ತು NRC ಗೆ ನೇರ ಸಂಬಂಧವಿದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದು ನಮ್ಮ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜರವರಲ್ಲಿ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು. ನಮ್ಮ ತಾಲೂಕಿನಲ್ಲಿರುವ ಬಿಜೆಪಿಯೇತರ ಪಂಚಾಯತ್ ಗಳಲ್ಲಿ MPRನ್ನು ವಿರೋಧಿಸಿ ನಿರ್ಣಯವನ್ನು ಕೈಗೊಂಡು ಕರ್ನಾಟಕ ಸರಕಾರಕ್ಕೆ ಸಲ್ಲಿಸುವುವಂತೆ ಕೋರಿಕೊಳ್ಳುವುದೆಂದು
ತೀರ್ಮಾನಿಸಲಾಯಿತು. ತಾಲೂಕು ಮುಸ್ಲಿಂ ಒಕ್ಕೂಟದ ಮಹಾಸಭೆಗೆ ಶೀಘ್ರವಾಗಿ ದಿನಾಂಕ ನಿಗದಿಪಡಿಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲೂಕು ಮುಸ್ಲಿಂ ಒಕ್ಕೂಟ ಇದರ ಮಾಜಿ ಅಧ್ಯಕ್ಷರಾದ ಹಸನಬ್ಬ ಚಾರ್ಮಾಡಿ, ಬಿ,ಎಂ, ಹಮೀದ್,ಅರೆಕಲ್ ಮಮ್ಮಿಕುಞ್ಞ, ಖಾಲಿದ್ ಪುಲಾಬೆ,ಸಲೀಂ ಎಸ್,ಕೆ, ಅಬ್ದುಲ್ ರಹಮಾನ್, ಅಬ್ದುಲ್ ಖಾದರ್,ಹಕೀಂ ಬಲಿಪಾಯ,ಮುಸ್ತಫಾ ಜಿ,ಕೆರೆ, ರಝಾಕ್ ಕನ್ನಡಿ ಕಟ್ಟೆ,ನಿಸಾರ್ ಕುದ್ರಡ್ಕ,ಅಕ್ಬರ್ ಬೆಳ್ತಂಗಡಿ, ಇಕ್ಬಾಲ್ ಬಳ್ಳಮಂಜ,ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.