ಕೊರೊನಾ ಭಯಪಡುವ ಅಗತ್ಯವಿಲ್ಲ-ಡಾ| ಗೋಪಾಲಕೃಷ್ಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ಕಾಯಿಲೆ ಬಗ್ಗೆ ಜನರು ಬಹಳಷ್ಟು ಭಯಭೀತರಾಗಿದ್ದು, ಇದರ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಉಜಿರೆ ಬೆನಕಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಗೋಪಾಲಕೃಷ್ಣ ತಿಳಿಸಿದ್ದಾರೆ.

ಇದು ವೈರಸ್‌ನಿಂದ ಬರುವ ಕಾಯಿಲೆ ಇದರ ಬಗ್ಗೆ ಪತ್ರಿಕೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬರುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಾಗಬೇಕೇ ಹೊರತು ಭಯಹುಟ್ಟಿಸುವ ಕಾರ್ಯ ಮಾಡಬಾರದು. ನಾವು ಸುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಮ್ಮ ಹಿರಿಯರು ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ನಾವು ಅದನ್ನು ಪಾಲಿಸಬೇಕು. ಇದು ಶೇ೧ರಷ್ಟು ಮಂದಿಗೆ ಬಂದಿದೆ. ಅದರಲ್ಲೂ ಬೇರೆ ಯಾವುದಾದರೂ ಕಾಯಿಲೆ ಇದ್ದವರಿಗೆ, ಪ್ರಾಯಸ್ಥರಿಗೆ ಬಾಧಿಸಿದರೆ ಮಾರಾಣಾಂತಿಕವಾಗಬಹುದು. ಇಲ್ಲವಾದರೆ ಸಾಮಾನ್ಯವಾಗಿ ಕೊಡುವ ಚಿಕಿತ್ಸೆ ಸಾಕಾಗುತ್ತದೆ ಇದರಲ್ಲಿ ಶೇ ೯೭ಕ್ಕೂ ಮಿಕ್ಕಿ ಜನರು ಗುಣಮುಖರಾಗಿದ್ದಾರೆ. ನಾವು ಜಾಗೃತರಾಗಬೇಕು. ರೋಗಿಯ ಹತ್ತಿರ ಹೋಗದೆ ಮುಂಜಾಗೃತ ಕ್ರಮಗಳನ್ನು ಕೈಗೊಂಡರೆ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.