ವಿದೇಶದಿಂದ ಮರಳಿದವರು ತಪಾಸಣೆಗೆ ಒಳಗಾಗಿ -ಡಾ. ಮುರಳಿಕೃಷ್ಣ ಇರ್ವತ್ತಾಯ, ಶ್ರೀಕೃಷ್ಣ ಆಸ್ಪತ್ರೆ ಕಕ್ಕಿಂಜೆ

ಕೊರೊನಾ ವೈರಸ್ (ಕೋವಿಡ್-೧೯) ಎಂಬುದು ಚೀನಾದ ವುಹಾನ್‌ನಲ್ಲಿ ಹುಟ್ಟಿ ಜಗತ್ತಿಗೆ ಹರಡಿದೆ. ಇದು ಭಾರತದಲ್ಲಿ ಹೆಚ್ಚು ವ್ಯಾಪಿಸದಂತೆ ತಡೆಯಲು ವಿದೇಶದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ ತಪಾಸಣೆ ನಡೆಸಿ ಸೋಂಕಿನ ಲಕ್ಷಣಗಳಿದ್ದರೆ ಅವರನ್ನು ಬೇರ್ಪಡಿಸಬೇಕು.
ಇತ್ತೀಚೆಗೆ ವಿದೇಶದಿಂದ ಆಗಮಿಸಿದವರು ಸರಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿ ಆರೋಗ್ಯವನ್ನು ದೃಢಪಡಿಸಿಕೊಳ್ಳುವುದು ಸಾರ್ವಜನಿಕರ ಕ್ಷೇಮದ ದೃಷ್ಟಿಯಿಂದ ಉತ್ತಮ. ಕೆಮ್ಮು, ಶೀತ, ನೆಗಡಿಯಾದವರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು. ನಮಗೆ ಸೋಂಕು ತಗುಲದಂತೆ ಆಗಾಗ ಕೈಗಳನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕವಾಗಿ ಗುಂಪು ಕೂಡದೇ ಮನೆಯಲ್ಲಿದ್ದರೆ ಒಳ್ಳೆಯದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.