ಪಡಿತರ ಪಡೆಯಲು ಇನ್ನು ಒಟಿಪಿ ಸಂಖ್ಯೆ ಹೇಳಿ

ಬೆಳ್ತಂಗಡಿ: ಕೊರೊನಾ ವೈರಸ್ ತಡೆ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್‍ಲೈನ್ ಪಡಿತರ ವಿತರಣೆಯನ್ನು ಬಯೋಮೆಟ್ರಿಕ್ ಬದಲು ಆಧಾರ್‍ನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ (ಒನ್ ಟೈಮ್ ಪಾಸ್‍ವರ್ಡ್) ಕಳುಹಿಸುವ ಮೂಲಕ ಪಡಿತರ ವಿತರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲ ಪಡಿತರ ಅಂಗಡಿಗಳಿಗೆ ಸೂಚಿಸಿದೆ.

ಮಾ.18ರಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಪಡಿತರ ಪಡೆಯಲು ಬರುವವರು ಆಹಾರ ಇಲಾಖೆಯಲ್ಲಿ ನೋಂದಣಿಯಾಗಿರುವ ತಮ್ಮ ದೂರವಾಣಿ ಸಂಖ್ಯೆ ಇರುವ ಮೊಬೈಲ್ ಫೋನ್‍ನ್ನು ತೆಗೆದುಕೊಂಡು ಬರಬೇಕು ಆಧಾರ್‍ನಲ್ಲಿ ಮೊಬೈಲ್ ನೋಂದಣಿ ಆಗಿಲ್ಲದಿದ್ದರೆ ಬಯೋಮೆಟ್ರಿಕ್ ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.