ಕೊರೊನಾ ವೈರಸ್: ಮಾ.22ರಂದು ದೇಶಾದ್ಯಂತ ‘ಜನತಾ ಕರ್ಫ್ಯೂ’ ಪ್ರಧಾನಿ ನರೇಂದ್ರ ಮೋದಿ ಕರೆ

ದೇಶದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 22ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಜನತಾ ಕರ್ಫ್ಯೂ’ ನಡೆಸಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ಮಾ.19ರ‌ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಅವತ್ತು ಒಂದು ದಿನ ಮಟ್ಟಿಗೆ ಮನೆಯಿಂದ ಯಾರೂ ಹೊರಬೇಡಿ, ಈ ಜನತಾ ಕರ್ಫ್ಯೂ ಬಗ್ಗೆ ಇಂದಿನಿಂದಲೇ ನಿಮ್ಮ ಸುತ್ತಲಿನ ೧೦ ಜನರಿಗೆ ಅರಿವು ಮೂಡಿಸಿ. ಜನತಾ ಕರ್ಫ್ಯೂವನ್ನು ಪ್ರತಿ ನಾಗರಿಕನು ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮ ಕೆಲ ವಾರಗಳು ನನಗೆ ಬೇಕಾಗಿದೆ. ಕೊರೊನಾವೈರಸ್ ಗೆ ಇನ್ನೂ ಸರಿಯಾದ ಲಸಿಕೆ ಸಿಕ್ಕಿಲ್ಲ. ಜಗತ್ತು ಸಮಸ್ಯೆಯನ್ನು ಎದುರಿಸುತ್ತಿದೆ. ದೊಡ್ಡ ದೇಶಗಳಲ್ಲೂ ಈ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಈ ಮಹಾಮಾರಿ ಹರಡುವುದಿಲ್ಲ ಎಂದು ನಾವು ಆಲೋಚಿಸುವುದು ತಪ್ಪು ಎಂದವರು ಹೇಳಿದರು.

ಪ್ರಧಾನಿ ಮೋದಿ ದೇಶದ ಜನರಿಗೆ ಹೇಳಿದ್ದೇನು?

೧. ಜನತಾ ಕರ್ಫ್ಯೂ ದಿನ (ಮಾ.೨೨) ಬೆಳಗ್ಗೆ ೭ ರಿಂದ ರಾತ್ರಿ ೯ರವರೆಗೆ ಯಾರು ರಸ್ತೆಗೆ ಇಳಿಯಬಾರದು, ಸಾರ್ವಜನಿಕ ಸ್ಥಳಗಳಿಗೆ ತೆರಳದೆ ಮನೆಯಲ್ಲೇ ಇರಬೇಕು.
೨. ಹಲವಾರು ದಿನಗಳಿಂದ ಕೊರೊನಾ ವೈರಸ್ ವಿರುದ್ಧ ಲಕ್ಷಾಂತರ ಜನರು ಆಸ್ಪತ್ರೆಗಳಲ್ಲಿ , ವಿಮಾನನಿಲ್ದಾಣಗಳಲ್ಲಿ, ಪೌರಕಾರ್ಮಿಕರು, ಪೊಲೀಸರು, ಯೋಧರು, ಮಾಧ್ಯಮ ಸಿಬ್ಬಂದಿ, ಪ್ಯಾರಾಮೆಡಿಕಲ್ ಸಿಬ್ಬಂದಿಗಳು ತಮ್ಮ ಆರೋಗ್ಯ ಪಣಕ್ಕಿಟ್ಟು ದುಡಿಯುತ್ತಿದ್ದಾರೆ ಅವರಿಗೆಲ್ಲ ಮಾ.೨೨ರಂದು ಕೃತಜ್ಞತೆ ಸಲ್ಲಿಸಲು ಸಂಜೆ ೫ ಗಂಟೆಗೆ ಮನೆಯ ಕಿಟಕಿ, ಬಾಗಿಲು,ಅಥವಾ ಬಾಲ್ಕನಿಯಲ್ಲಿ ಬಂದು ಚಪ್ಪಾಳೆ, ಗಂಟೆ ಬಾರಿಸುವ ಮೂಲಕ ಸೇವೆ ಸಲ್ಲಿಸುತ್ತಿರುವವರಿಗೆ ಧನ್ಯವಾದ ಸಲ್ಲಿಸಬೇಕು.

೩ .ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಮಾಧ್ಯಮ, ಅಗ್ನಿಶಾಮಕ ಸಿಬ್ಬಂದಿ ಇತರ ಅಗತ್ಯ ಸೇವೆ ಸಲ್ಲಿಸುವವರಿಗೆ ಜನತಾ ಕರ್ಫ್ಯೂ ಅನ್ವಯವಾಗಲ್ಲ.

೪. ದೇಶದ ನಾಗರಿಕರು ಕೇಂದ್ರ, ರಾಜ್ಯ ಸರಕಾರಗಳ ಸೂಚನೆಗಳು ಪಾಲಿಸಬೇಕು ಈ ಮೂಲಕ ಸೋಂಕುಪೀಡಿತರಾಗುವುದರಿಂದ ನಾವು ಪಾರಾಗಬೇಕು. ಇತರರೂ ನಮ್ಮಿಂದ ತೊಂದರೆಗೊಳಗಾಗಬಾರದು.ಮನೆಯಿಂದಲೇ ವ್ಯವಹಾರ, ಉದ್ಯಮ, ಕೆಲಸಗಳನ್ನು ಮಾಡಿ.

೫.”ಜನರಿಂದ ಜನರಿಗಾಗಿ ಜನರೇ ಹೇರುವ ಕರ್ಫ್ಯೂ ‘ಜನತಾ ಕರ್ಫ್ಯೂ ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಲಭಿಸುತ್ತದೆ. ರಾಜ್ಯ ಸರಕಾರಗಳು ಈ ಬಗ್ಗೆ ಗಮನಹರಿಸಬೇಕು. ಜನತಾ ಕರ್ಫ್ಯೂಗೆ ಬೇಕಾದ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಘಟನೆಗಳು, ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಈ ಬಗ್ಗೆ ಕೆಲಸ ಮಾಡಬೇಕು. ಈ ಬಗ್ಗೆ ಸಾಧ್ಯವಾದರೆ 10 ಜನರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಬೇಕು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.