HomePage_Banner_
HomePage_Banner_
HomePage_Banner_

ಶಿರ್ಲಾಲಿನ ಒಸರುಗುಂಡಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ರೈತರ ಏಳಿಗೆಗಾಗಿ ಹಾಗೂ ಗ್ರಾಮದ ನೀರಾವರಿ ಅಭಿವೃದ್ಧಿಯ ದೃಷ್ಟಿಯಿಂದ ಸುಮಾರು ರೂ.3 ಕೋಟಿ ಅನುದಾನದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.

ತಾಲೂಕಿನಲ್ಲಿ ನೀರಿನ ಸಂರಕ್ಷಣೆ ಮತ್ತು ಹನಿ ನೀರಿನ ಅರಿವು ಮೂಡಿಸಲು ಒಸರುಗುಂಡಿಯಲ್ಲಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟು ಸಹಾಯಕವಾಗಲಿದೆ ಎಂದು ಶಾಸಕರು ಹೇಳಿದರು.

ಶಿಲಾನ್ಯಾಸ ಕಾರ್ಯಕ್ರಮ ಸಂದರ್ಭದಲ್ಲಿ ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆನಂದ್ ಓಡಿಮಾರ್, ತಾರಾನಾಥ್ ಗೌಡ ಶಿರ್ಲಾಲ್ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಸಾಮಾನಿ, ನಿರ್ದೇಶಕರಾದ ಶೀನಪ್ಪ ಮಲೆಕ್ಕಿಲ , ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲಬೈಲು ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.