ಗೇರುಕಟ್ಟೆಯ ಬಡ ಕುಟುಂಬಕ್ಕೆ ದಾನಿಗಳಿಂದ ಮನೆ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆ ಜನತಾ ಕಾಲೋನಿಯ ಗುಡಿಸಲಲ್ಲಿ ಬಡತನದಲ್ಲಿ ಜೀವನ ನಡೆಸುತ್ತಿದ್ದ ದಿ. ಚೋಮರವರ ಪತ್ನಿಯಾದ ಸೋನೆರವರಿಗೆ ಕಳಿಯ ಗ್ರಾಮಕರಣಿಕರಾದ ಎಂ.ಎಸ್ ರವಿ ರವರ ಮುತುವರ್ಜಿಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳಾದ ಪ್ರಕಾಶ್ ಶೆಟ್ಟಿ ಮಹಾಲಕ್ಷ್ಮೀ ಟ್ರೇಡರ್‍ಸ್ ಬೆಳ್ತಂಗಡಿ, ರಬ್ಬರ್ ಇಂಡಿಯಾ ಮಹೇಶ್ ಕುಮಾರ್, ರಮೇಶ್ ಉದ್ಯಮಿ ಮೇಲಂತಬೆಟ್ಟು , ಚಾಮುಂಡೇಶ್ವರಿ ಸೇಲ್ಸ್ ಬೆಳ್ತಂಗಡಿ ಮಾಲಕರಾದ ಸುದೀರ್ ಹೊಳ್ಳ, ಯಶೋಧರ (ಪೈಂಟರ್) ಮೇಲಂತಬೆಟ್ಟು, ಉದ್ಯಮಿ ಚಂದ್ರ ಶೇಖರ್ ಈ ಬಡ ವಿಧವೆ ಮಹಿಳಾ ಕುಟುಂಬಕ್ಕೆ ನೆರವು ನೀಡುವ ಮೂಲಕ ಸಮಾಜದ ನೋವಿಗೆ ಧ್ವನಿಯಾಗಿದ್ದಾರೆ.

ಮಾ.೧೫ ರಂದು ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಕೀಲಿ ಕೈ ಕೊಟ್ಟು ಮನೆಯನ್ನು ಹಸ್ತಾಂತರಿಸಿ ದಾನಿಗಳಿಂದ ಸಮಾಜದ ಸೇವಾ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡಿದ್ದಾರೆ. ಸಮಾಜದ ಕಣ್ಣೀರೊರೆಸುವ ಕಾರ್ಯ ನಿರಂತರವಾಗಿ ನಿಮ್ಮಿಂದ ನಡೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಳಿಯ ಪಂ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್, ಗ್ರಾಮಕರಣಿಕರಾದ ಎಂ.ಎನ್ ರವಿ, ದಾನಿಗಳಾದ ಮಹೇಶ್ ಕುಮಾರ್, ರಮೇಶ್, ಯಶೋಧರ, ಚಂದ್ರಶೇಖರ, ಗ್ರಾ.ಪಂ ಕಾರ್ಯದರ್ಶಿ ಕುಂಞ ಕೆ, ಗ್ರಾ.ಪಂ ಸದಸ್ಯರಾದ ಕೆ.ಎಮ್ ಅಬ್ದುಲ್ ಕರೀಂ ಗೇರುಕಟ್ಟೆ, ಸ್ಥಳೀಯರಾದ ಮಹಮ್ಮದ್, ಶ್ರೀಮತಿ ಚಂದ್ರಾವತಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.