ಮಾ.25, ಉಪ್ಪಿನಂಗಡಿಯಲ್ಲಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನ ನೂತನ ಮಳಿಗೆ ಶುಭಾರಂಭ

ಬೆಳ್ತಂಗಡಿ : ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನ ಮತ್ತೊಂದು ನೂತನ ಮಳಿಗೆ ಹಸನ್ ಟವರ್‍ಸ್, ಹಳೆಬಸ್‌ಸ್ಟಾಂಡ್ ಉಪ್ಪಿನಂಗಡಿ ಪಟ್ಟಣದಲ್ಲಿ ಮಾ.25 ರಂದು ಯುಗಾದಿಯ ಶುಭದಿನದಂದು ಶುಭಾರಂಭಗೊಳ್ಳಲಿದೆ.ಕಳೆದ ೫ ವರ್ಷಗಳಿಂದ ಬೆಳ್ತಂಗಡಿ, ಉಜಿರೆ, ಮಡಂತ್ಯಾರು ಬಂಟ್ವಾಳದಲ್ಲಿ ವಿಶಾಲವಾದ ವಸ್ತ್ರಮಳಿಗೆ ಹೊಂದಿದ್ದು, ವಸ್ತ್ರ ವ್ಯವಹಾರದಲ್ಲಿ ತಮ್ಮದೆ ಆದ ಛಾಪು ಹೊಂದಿದೆ. ಕೇವಲ ವ್ಯಾಪಾರ ಮಾತ್ರವಲ್ಲದೆ, ಜಿಲ್ಲೆಯ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಎಲ್ಲರ ಜೊತೆ ಸಮಾನವಾಗಿ ಬೆರೆಯುತ್ತಾ ಸರ್ವರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.

ಉಪ್ಪಿನಂಗಡಿಯ ವಸ್ತ್ರಮಳಿಗೆಯ ವಿಶೇಷತೆ :
ಉಪ್ಪಿನಂಗಡಿಯ ನೂತನ ವಸ್ತ್ರಮಳಿಗೆಯು ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮದುವೆ ಜವಳಿಗೆ ವಿಶೇಷ ಪ್ರಶಸ್ತ್ಯ ನೀಡಲಾಗಿದೆ. ಸಂಸ್ಥೆಯಲ್ಲಿ ಹೊಸ ವಿನ್ಯಾಸದ ಕಾಂಜೀವರಂ, ಧರ್ಮಾವರಂ, ಮೈಸೂರ್ ಸಿಲ್ಕ್ , ರೇಶ್ಮೆ ಸೀರೆಗಳು ಹಾಗೂ ಪುರುಷರ, ಮಹಿಳೆಯರ, ಮಕ್ಕಳ ಉಡುಪುಗಳು ಲಭ್ಯ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಚೌದರಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.