ನ್ಯಾಯತರ್ಪು ಗೌಡರ ಯಾನೆ ಒಕ್ಕಲಿಗರ ವಾರ್ಷಿಕೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು :ಪ್ರತಿಯೊಬ್ಬರು ಹಣ,ಅಂತಸ್ತು,ಅಧಿಕಾರ, ಹೆಸರುಗಳನ್ನು ಗಳಿಸುವುದರ ಜೊತೆಯಲ್ಲಿ ಕಾಯಕವನ್ನು ಧರ್ಮ ಮಾರ್ಗದಲ್ಲಿ ಸಂಪಾದಿಸ ಬೇಕು.ಉತ್ತಮವಾದ ನಡವಳಿಕೆ, ಸಂಸ್ಕಾರ,ಇನ್ನೊಬ್ಬರಿಗೆ ಅನ್ಯಾಯ ಮಾಡದೆ ಬದುಕುವ ಮೂಲಕ ಮಾದರಿಯಾಗ ಬೇಕು.ಇಂತಹ ಒಳ್ಳೆಯ ನಿಯಮಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಬದುಕಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ.ಆ ಮೂಲಕ ಸಮಾಜದಲ್ಲಿ ಗೌರವ ಶಾಶ್ವತವಾಗಿ ಉಳಿಯತ್ತದೆ.ಪೋಷಕರು ಜವಾಬ್ದಾರಿಯಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಕಾರ, ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರಣೆ ನೀಡಿದಾಗ ಯುವ ಪೀಳಿಗೆ ದುಶ್ಚಟಗಳಿಂದ ದೂರವಾಗಲು ಸಾಧ್ಯ ಎಂದು ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ. ವಾಣಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ವಿದ್ಯಾ ಶ್ರೀನಿವಾಸ ಗೌಡ ಹೇಳಿದರು.
ನ್ಯಾಯತರ್ಪು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕೋತ್ಸವ ಕಲಾಯಿತೊಟ್ಟು ವಿಜಯ ಗೌಡರ “ಅಪೂರ್ವ ನಿಲಯ”ದಲ್ಲಿ ಮಾ.15 ರಂದು ಜರುಗಿತು.


ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಜಿ.ಸೋಮೇ ಗೌಡ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭಾ ಹಾರೈಸಿದರು.ಸಂಘದ ಅಧ್ಯಕ್ಷ ದಿನೇಶ್ ಗೌಡ ಕಲಾಯಿತೊಟ್ಟು ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಾಣಿ ಸೌಹಾರ್ದ ಸಹಕಾರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಹೆಚ್.ಪದ್ಮ ಗೌಡ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಸಂಘದ ಯಶಸ್ವಿಗೆ ನಮ್ಮ ಸಮಾಜ ಬಾಂಧವರು ಕೈಜೋಡಿಸ ಬೇಕು.ಹಾಗೂ ಅಭಿವೃದ್ಧಿ,ಶಿಸ್ತು ಬದ್ಧ ಜೀವನದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವಂತೆ ತಿಳಿಸಿದರು.ಬೆಳ್ತಂಗಡಿ ವಾಣಿ ಸೌಹಾರ್ದ ಕೋ ಅಪರೇಟವ್ ನಿರ್ದೇಶಕ ನಾರಾಯಣ ಗೌಡ ದೇವಸ್ಯ, ಬೆಳ್ತಂಗಡಿ ತಾಲೂಕು ಸಂಘದ ನಿರ್ದೇಶಕ ವಿಜಯ ಗೌಡ ಕಲಾಯಿತೊಟ್ಟು, ಧರ್ಣಪ್ಪ ಗೌಡ ಬಂದಾರು, ಯುವ ವೇದಿಕೆ ಅಧ್ಯಕ್ಷ ಯಶವಂತ ಗೌಡ ಬನಂದೂರು,ನ್ಯಾಯತರ್ಪು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ವಸಂತ ಗೌಡ ಕಲಾಯಿತೊಟ್ಟು,ನ್ಯಾಯತರ್ಪು ಗ್ರಾಮದ ಗುತ್ತು ಗೌಡರಾದ ಕೇಶವ ಗೌಡ ಕರತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಸ್ಥಳ ಕೆ.ಎಸ್.ಅರ್. ಟಿ.ಸಿ ಘಟಕದ ಅಪಘಾತ ರಹಿತ ಪ್ರಶಸ್ತಿ ವಿಜೇತ ಬಸ್ಸು ಚಾಲಕ ವೆಂಕಪ್ಪ ಗೌಡ ಕರತ್ತೂರು,ವಿವಿಧ ಸ್ಪರ್ಧೆಯಲ್ಲಿ ರಾಜ್ಯ,ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ವಾಣಿ ಶಿಕ್ಷಣ ಸಂಸ್ಥೆಯ ಪಿ.ಯು.ಸಿ ವಿದ್ಯಾರ್ಥಿನಿ ಕು.ದೀಕ್ಷಾ ಡಿ.ಎಮ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಪಿಯುಸಿ,ಎಸ್. ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ಮತ್ತು ಪಠ್ಯೇತರ ಚಟುವಟಿಕೆ,ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಸ್ವಜಾತಿ ಬಾಂಧವರ ವಿದ್ಯಾರ್ಥಿಗಳನ್ನು ಗೌರವಿಸಿದರು. ಎಲ್ಲಾ ವಿಧ್ಯಾರ್ಥಿ- ವಿಧ್ಯಾರ್ಥಿನಿಗಳಿಗೆ ಬರೆಯುವ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಅಪರೇಟಿವ್ ನಿರ್ದೇಶಕರಾದ ಗೋಪಾಲ ಕೃಷ್ಣ ಗೌಡ ಜಿ.ಕೆ ಉಜಿರೆ, ಮಾಧವ ಗೌಡ ಬೆಳ್ತಂಗಡಿ,ಸುರೇಶ್ ಗೌಡ ಬಿ.ಕೌಡಂಗೆ,ವಾಣಿ ಪ.ಪೂ.ಕಾಲೇಜು ಉಪನ್ಯಾಸಕ ಮಹಾಬಲ ಗೌಡ, ರಾಜ್ಯ ಶಾಸ್ತ್ರ ಉಪನ್ಯಾಸಕಿ ಮೀನಾಕ್ಷಿ ಎಮ್.ಗೌಡ,ತಾಲೂಕು ಮಹಿಳಾ ವೇದಿಕೆ ಉಪಾಧ್ಯಕ್ಷರಾದ ಸುಭಾಷಿಣಿ ಜೆಲ.ಕುಳಾಯಿ,ಭಾರತಿ ಧರ್ಣಪ್ಪ ಗೌಡ ಕಡಿರುದ್ಯಾವರ,ಹಿರಿಯರಾದ ಜಾರಪ್ಪ ಗೌಡ ಕಲಾಯಿತೊಟ್ಟು, ಪಂಚಾಯತು ಮಾಜಿ ಸದಸ್ಯ ತಿಮ್ಮಪ್ಪ ಗೌಡ ಕೆರೆಕೊಡಿ,ಬಾಬು ಗೌಡ ಬಂದಾರು, ಕೊಯ್ಯೂರು ಗ್ರಾಮ ಸಮಿತಿ ಕಾರ್ಯದರ್ಶಿ ದಿನೇಶ್ ಗೌಡ ದೇಂತ್ಯಾರುಬೊಟ್ಟು, ಕಳಿಯ ಯುವ ವೇದಿಕೆ ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ,ಕಳಿಯ ಗ್ರಾಮದ ಕಾರ್ಯದರ್ಶಿ ಲೋಹಿತಾಶ್ವ ಗೌಡ ಕಲ್ಕುರ್ಣಿ ಸಭೆಯಲ್ಲಿ ಉಪಸ್ಥಿರಿದರು. ಸಂಘದ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ವರದಿ ವಾಚಿಸಿದರು.ನ್ಯಾಯತರ್ಪು ಗ್ರಾಮ ಸಮಿತಿ ಪದಾಧಿಕಾರಿಗಳು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ.ಸಮಾಜ ಬಾಂಧವರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ವಿಜಯ ಗೌಡ ಕಲಾಯಿತೊಟ್ಟು ಸ್ವಾಗತಿಸಿ,ಕುಶಾಲಪ್ಪ ಗೌಡ ಕಲಾಯಿತೊಟ್ಟು ಕಾರ್ಯಕ್ರಮ ನಿರ್ವಹಿಸಿದರು. ಯವ ವೇದಿಕೆ ಜಯರಾಮ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.