ಬರಯ ಬ್ರಹ್ಮಕಲಶೋತ್ಸವಕ್ಕೆ ದಿನ ಗಣನೆ; ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷರಾಗಿ ಗಜಾನನ ನಾತು ಸವಣಾಲು ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಳದಂಗಡಿ ಅಜಿಲ ಸೀಮೆಯಲ್ಲಿನ ಸುಮಾರು ಎಂಟುನೂರು ವರ್ಷಗಳ ಐತಿಹ್ಯವಿರುವ ಸೂಳಬೆಟ್ಟು ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2020ರ ಎ. 23 ರಿಂದ 28 ರವರೆಗೆ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿದ್ದು ಮಾರ್ಗದರ್ಶನ ನೀಡಲಿದ್ದಾರೆ. ದೇವಳದ ಆನುವಂಶೀಯ ತಂತ್ರಿಗಳಾದ ಸೀತಾರಾಮ ಹೆಬ್ಬಾರ್ ಕಾಜಿಮುಗೇರ ಅವರ ನೇತೃತ್ವದಲ್ಲಿ ಮತ್ತು ವೇದಮೂರ್ತಿ ಅನಂತ ಭಟ್ ಗೋಖಲೆ ಹೊಸಹಿತ್ಲು ಅವರ ಅಧ್ವರ್ಯುತನದಲ್ಲಿ ಆರು ದಿನಗಳ ಬ್ರಹ್ಮಕಲಶೋತ್ಸವದ ಸಂಭ್ರಮವು ಸಂಪನ್ನಗೊಳ್ಳಲಿದೆ.

ಸಮಿತಿ ಕಾರ್ಯಾಧ್ಯಕ್ಷರಾಗಿ ಗಜಾನನ ನಾತು ಸವಣಾಲು, ಅಧ್ಯಕ್ಷರಾಗಿ ಎನ್. ಸದಾನಂದ ಸಹಸ್ರಬುದ್ಧೆ, ಉಪಾಧ್ಯಕ್ಷರಾಗಿ ಶಂಕರ ಹೆಬ್ಬಾರ್ ಕಾಜಿಮುಗೇರು, ಪ್ರವೀಣಚಂದ್ರ ಮೆಹೆಂದಳೆ ಸೂಳಬೆಟ್ಟು, ಸತೀಶ್ ತಾಮ್ಹನ್‌ಕರ್ ಉಲ್ಪೇ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ ಗೋರೆ ಕುದ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ರಘುನಾಥ ದಾಮ್ಲೆ ಅಳದಂಗಡಿ ಇವರ ಮುಂದಾಳತ್ವದಲ್ಲಿ ಬ್ರಹ್ಮಕಲಶೋತ್ಸವ ನೆರವೇರಲಿದೆ

ಗೌರವ ಸಲಹೆಗಾರರಾಗಿ ಗೋಪಾಲಕೃಷ್ಣ ಮೆಹೆಂದಳೆ, ನರಹರಿ ಮೆಹೆಂದಳೆ, ಡಾ| ಎನ್.ಎಮ್.ತುಳಪುಳೆ, ಮುರಲೀಧರ ಬಾಪಟ್, ಡಾ| ಶಶಿಧರ ಡೋಂಗ್ರೆ, ಪ್ರಭಾಕರ ಗೋಖಲೆ, ಮಹಾದೇವ ಗೋರೆ, ಸೀತಾರಾಮ ಮೆಹೆಂದಳೆ, ವಾಸುದೇವ ಸಹಸ್ರಬುದ್ದ್ಯೆ, ಲಕ್ಷ್ಮಣ ಹೆಬ್ಬಾರ್, ಸುದರ್ಶನ ಚಿಪ್ಳೂಣ್‌ಕರ್, ಗೋವಿಂದ ದಾಮ್ಲೆ, ಪ್ರಭಾಕರ ನಾತು, ಸದಾಶಿವ ಆಠವಳೆ, ಸಹಕಾರ-ಸಮನ್ವಯಕಾರರಾಗಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳ್ತೆ ಮೊಕ್ತೇಸರರಾದ ಶಿವಪ್ರಸಾದ ಅಜಿಲ, ಎಸ್.ಕೆ.ಡಿ.ಆರ್.ಡಿ.ಪಿ.ಯೋಜನಾಧಿಕಾರಿ ಯಶವಂತ ಎಸ್., ಅರವಳಿಕೆ ತಜ್ಞ ಡಾ| ಶ್ರೀಪಾದ ಮೆಹೆಂದಳೆ, ಶಂಕರ ಹೆಗ್ಡೆ ಬೆಳ್ತಂಗಡಿ, ಪಿ. ಪ್ರಶಾಂತ ಹೆಬ್ಬಾರ್ ಮೂಡಬಿದರೆ, ಯೋಜನೆಯ ವಲಯ ಮೇಲ್ವಿಚಾರಕಿ ಮಲ್ಲಿಕಾ, ಸೇವಾ ಪ್ರತಿನಿಧಿಗಳಾದ ಹರಿಣಾಕ್ಷಿ ಲತೀಶ್, ಸವಿತಾ, ಮಮತಾ, ಹೇಮಲತಾ, ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಕಾರ್ಯ ನಿರ್ವಹಿಸಲಿದ್ದಾರೆ.

ಸ್ವಾಗತ ಸಮಿತಿ ಸಂಚಾಲಕರಾಗಿ ನಿರಂಜನ ಜೋಶಿ, ವೈದಿಕ ಸಮಿತಿ ಸಂಚಾಲಕರಾಗಿ ಪದ್ಮನಾಭ ಜೋಶಿ, ಸೇವಾ ಸಮಿತಿ ಸಂಚಾಲಕರಾಗಿ ಪ್ರಕಾಶ ಜೋಶಿ, ಊಟೋಪಚಾರ ಸಮಿತಿ ಸಂಚಾಲಕರಾಗಿ ರಾಮಚಂದ್ರ ಸಹಸ್ರಬುದ್ಧೆ, ಪಾಕಶಾಲೆ ಮತ್ತು ಉಗ್ರಾಣ ಸಮಿತಿ ಸಂಚಾಲಕರಾಗಿ ದಿನೇಶ ಅಭ್ಯಂಕಾರ್, ಆರ್ಥಿಕ-ಕಲಶ-ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ ನಾತು, ಬೆಳಕು-ವಿದ್ಯುತ್-ನೀರಾವರಿ ಸಮಿತಿ ಸಂಚಾಲಕರಾಗಿ ವಿವೇಕ ಕೇಳ್ಕರ್, ಮಾಧ್ಯಮ-ಪ್ರಚಾರ-ಸಮಿತಿ ಸಂಚಾಲಕರಾಗಿ ದೀಪಕ ಆಠವಳೆ, ಚಪ್ಪರ-ಅಲಂಕಾರ ಸಮಿತಿ ಸಂಚಾಲಕರಾಗಿ ಪ್ರದೀಪ ಗೋಖಲೆ, ಸ್ವಚ್ಛತಾ ಸಮಿತಿ ಸಂಚಾಲಕರಾಗಿ ನಾರಾಯಣ ಸಾಲಿಯಾನ್, ಹೊರೆಕಾಣಿಕೆ ಸಮಿತಿ ಸಂಚಾಲಕರಾಗಿ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಪಾರ್ಕಿಂಗ್ ಸಮಿತಿ ಸಂಚಾಲಕರಾಗಿ ಶ್ರೀಧರ ಕುಲಾಲ್ ಸೇವೆ ಸಲ್ಲಿಸಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.