ಸಂಕಷ್ಟದಲ್ಲಿರುವ ಈ ಬಡ ಕುಟುಂಬಕ್ಕೆ ಬೇಕಾಗಿದೆ ಕಣ್ಣೀರು ಒರೆಸುವ ತಮ್ಮ ನೆರವಿನ ಆಸರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಬೆಳ್ಳೂರು ಬೈಲು ಸಣ್ಣಬೆಟ್ಟು ದಿವಂಗತ ಕುಂಞ್ಞಣ್ಣ ಗೌಡರ ಪುತ್ರ ಜನಾರ್ಧನ (47ವ) ಎಂಬವರು ಮುಂಬೈಯ ಹೋಟೆಲೋಂದರಲ್ಲಿ ಕೆಲಸ ಮಾಡುತ್ತಿದ್ದ ಇವರು  ಮಾ.3 ರಂದು ಅತೀಯಾದ ರಕ್ತದ ಒತ್ತಡದಿಂದ ಬಿದ್ದು ತಲೆಯ ಹಿಂಭಾಗಕ್ಕೆ ತೀವ್ರ ತರಹದ ಗಾಯಗಳಾಗಿ ಇದೀಗ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತೀವ್ರನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದು ಇದೀಗ ಮುಂದಿನ ಚಿಕಿತ್ಸೆಗೆ ಹಣಕಾಸಿನ ತೊಂದರೆ ಎದುರಾಗತಿದ್ದು ಈಗಾಗಲೇ ಮುಂಬೈಯಿಂದ ಅಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಕರೆತಂದಿದ್ದು 35000/- ಇದಕ್ಕೆ ನೀಡಿದ್ದು ಕೆ.ಎಂ.ಸಿ ಆಸ್ಪತ್ರೆಯಲ್ಲೂ 2 ದಿನದ ಚಿಕಿತ್ಸೆ ನೀಡಿದ್ದು ಇಲ್ಲಿಯೂ ಸುಮಾರು 40000/- ವೆಚ್ಚ ತಗುಲಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಗೆ ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಆಸ್ಪತ್ರೆಯಲ್ಲಿ ತಿಳಿಸಿದಾಗ ಆಷ್ಟು ದೊಡ್ಡ ಮೊತ್ತ ಸಂಗ್ರಹಿಸಲು ಸಾಧ್ಯವಾಗದೇ ಇರುವ ಈ ಕುಟುಂಬ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಇವರನ್ನು ದಾಖಲುಪಡಿಸಿದ್ದು ಇಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ವೈದ್ಯರು ತಿಳಿಸಿದ ಮೇರೆಗೆ ದಿಕ್ಕೆ ತೊಚ್ಚದೇ ಪ್ರಜ್ಞಾಹೀನ (ಕೋಮ) ಸ್ಥಿತಿಯಲ್ಲಿರುವ ಇವರನ್ನು ಮತ್ತೆ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದು ಈಗಾಗಲೇ ಇಲ್ಲಿ 31000/- ಪಾವತಿಸಲಾಗಿದೆ ಇದೀಗ ದಿನದಿಂದ ದಿನಕ್ಕೆ ಚಿಕಿತ್ಸೆಯ ಬಿಲ್ಲು ದುಪ್ಪಟ್ಟು ಆಗುತ್ತಿದ್ದು ಚಿಕಿತ್ಸೆಯ ಹಣಕ್ಕಾಗಿ ಪರದಾಡುವಂತಾಗಿದೆ ಹಾಗೂ ಮುಂದಿನ ಚಿಕಿತ್ಸೆಗೆ ಸುಮಾರು 5 ರಿಂದ 6ಲಕ್ಷ ವೆಚ್ಚ ತಗಲುವ ಸಾದ್ಯತೆ ಇದೆ.

ಕಳೆದ 2 ತಿಂಗಳ ಹಿಂದೆ ಇವರ ತಂದೆ ಧೀರ್ಘಕಾಲದ ಅನಾರೋಗ್ಯದಿಂದ ಮರಣ ಹೊಂದಿದ್ದು ಇವರ ಚಿಕ್ಕಿತ್ಸೆಗೆ, ಕೂಡಿಟ್ಟ ಹಣವೆಲ್ಲ ಖರ್ಚಾಗಿದ್ದು ಒಂದೆಡೆಯಾದರೆ ಕಳೆದ ವರ್ಷ ಬಂದ ಬೀಕರ ನೆರೆಯಿಂದಾಗಿ ಇವರ ತೋಟ,ಕೃಷಿ ಭೂಮಿ ಸಂಪೂರ್ಣವಾಗಿ ಹಾನಿಯಾಗಿದ್ದು ಈ ವರ್ಷ ಬೆಳೆಯಿಲ್ಲದೆ ತುಸು ಹೊತ್ತಿನ ಊಟಕ್ಕೂ ತೊಂದರೆಯಿದ್ದು ಇದೀಗ ಈ ಕುಟುಂಬದ ನಿರ್ವಹಣೆಯ ಜವಬ್ದಾರಿ ಹೊತ್ತ ಇವರು ಹಾಸಿಗೆ ಹಿಡಿದಿದ್ದು ಜೀವನ ಸಾಗಿಸಲು ಬಹಳ ಕಷ್ಟಕರವಾಗಿದೆ ಹಾಗಾಗಿ ಇವರನ್ನು ಬದುಕಿಸಿ ತರುವ ಪ್ರಯತ್ನಕ್ಕೆ ತಾವೆಲ್ಲರು ಒಂದಾಗಬೇಕಾಗಿದೆ.

ನಿಮ್ಮ ಸಹಾಯದ ನಿರೀಕ್ಷೆಯಲ್ಲಿದೆ ಈ ಬಡಕುಟುಂಬ.

ಧನ ಸಹಾಯ ಮಾಡಲಿಚ್ಚಿಸುವವರು ಈ ಕೆಳಕಂಡ ವಿಳಾಸದಲ್ಲಿರುವ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು.

ಬ್ಯಾಂಕ್ ಹೆಸರು:- ವಿಜಯಬ್ಯಾಂಕ್
ಶಾಖೆ:- ಮುಂಡಾಜೆ
ಖಾತೆ ಸಂಖ್ಯೆ – 115201011002739
IFSC Code – VIJB0001152

ಹೆಸರು- ಬೊಮ್ಮಣ್ಣಗೌಡ (ಗಾಯಾಳುವಿನ ಸಹೋದರ)
S/o ದಿ. ಕುಂಞ್ಞಣ್ಣಗೌಡ
ಸಣ್ಣಬೆಟ್ಟು ಮನೆ, ಬೆಳ್ಳೂರಬೈಲು ಕಾನರ್ಪ ಕಡಿರುದ್ಯಾವರ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

PHONE-PE 9972197634 ದೀಕ್ಷಿತ್(ಅಳಿಯ)

ಸಂಪರ್ಕ:- 9900892639, 9972197634

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.