ಸಮುದಾಯದಲ್ಲಿನ ನಮ್ಮ ಕಲಿಕೆ ಪದವಿಗಿಂತ ಮೇಲು: ಸುರೇಶ್ ರೈ ಸೂಡಿಮುಳ್ಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಾವು ಆಡುವ ಮಾತು ಬೇರೆ, ಅದನ್ನು ಸಮಾಜದಲ್ಲಿ ನಾವು ಅನುಷ್ಠಾನಿಸಿ ತೋರಿಸುವುದು ಬೇರೆ. ಅನುಷ್ಠಾನಕ್ಕೆ ತಾಳ್ಮೆ, ಸಹನೆ, ಅಪಾರ ತ್ಯಾಗ ಬೇಕಾಗುತ್ತದೆ. ನಮ್ಮ ನಡವಳಿಕೆ, ಸಂಘ ಚಟುವಟಿಕೆ, ವೈಯುಕ್ತಿಕ ಬದುಕು ಯಾವತ್ತೂ ಒಂದು ಧರ್ಮ ಅಥವಾ ಜಾತಿ ಆಧಾರಿತವಾಗಿರಬಾರದು. ಸಮುದಾಯದಲ್ಲಿ ನಾವು ಕಲಿಯುವ ಶಿಕ್ಷಣ ಯಾವ ಪದವಿ ವಿದ್ಯಾಭ್ಯಾಸದಲ್ಲೂ ಸಿಗದು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಹೇಳಿದರು.

ಭಾರತ ಸರಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಮಂಗಳೂರು ಇವರ ವತಿಯಿಂದ, 30 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮುಂಡಾಜೆ ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಆಯೋಜನೆಯಲ್ಲಿ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಾ.11 ರಿಂದ ಮಾ. 13 ರವರೆಗೆ ನಡೆದ ಮೂರು ದಿನಗಳ ಸನಿವಾಸ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ ಮಾತನಾಡಿ, ನಾಯಕತ್ವ ಎಂದರೆ ಸಮಾಜದಲ್ಲಿ ಗೂಂಡಾಗಿರಿ ಮಾಡುವುದಲ್ಲ. ಇಲ್ಲಿ ಪಡೆದ ತರಬೇತಿಯಲ್ಲಿ ನೀವು ಪಡೆದ ಮಾಹಿತಿ ಮತ್ತು ವಿದ್ಯೆಯನ್ನು ಬಳಸಿಕೊಂಡು ಸಮಾಜದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಆ ಮೂಲಕ ಸದೃಢ ಭಾರತ ಸಂಕಲ್ಪ ಕೈಗೊಂಡು ತೆರಳುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸಮಾಜದಲ್ಲಿ ನಾವು ಏನೇ ಆದರೂ ಮೊದಲು ನಮ್ಮಲ್ಲಿ ಜಾಗೃತವಾಗಬೇಕಾದುದು ಮನುಷ್ಯತ್ವ ಎಂದು ನೆನಪಿಸಿದರು. ಉದ್ಯಮಿ ದಿನಕರ ಆದೇಲು ಮಾತನಾಡಿ, ನಾಯಕತ್ವದ ಜೊತೆಗೆ ದಾರ್ಶನಿಕತೆ ಕೂಡ ಅಷ್ಟೇ ಮುಖ್ಯ. ನಮ್ಮ ನಡವಳಿಗೆ, ಸಂಸ್ಕಾರ ಸಮಾಜದಲ್ಲಿ ಅದಾಗಿಯೇ ನಮ್ಮನ್ನು ನಿರೂಪಿಸುತ್ತದೆ ಎಂದರು. ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಆಂಟನಿ ಟಿ.ಪಿ ಮಾತನಾಡಿ, ಜನ್ಮದಲ್ಲೇ ಪ್ರತಿಯೊಬ್ಬರಿಗೂ ವ್ಯಕ್ತಿತ್ವ ಇರುತ್ತದೆ. ತರಬೇತಿ ಎಂದರೆ ಆ ವ್ಯಕ್ತಿತ್ವಕ್ಕೆ ಪರಿಪೂರ್ಣ ನೀಡುವುದಾಗಿದೆ ಎಂದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಶೈಲಜಾ ಶುಭ ಕೋರಿದರು.

ಶಿಬಿರಾರ್ಥಿಗಳಾದ ಆಕಾಶ್, ಪ್ರವಚನ್, ಧರ್ಮಶ್ರೀ, ಅನುರಾಧಾ, ಸಿಲ್ವಿಯಾ ಮತ್ತು ವಿನೀತಾ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಆಯೋಜಕರಾಗಿದ್ದ ಯಂಗ್ ಚಾಲೆಂಜರ್‍ಸ ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಇಲ್ಲಿ ಪಡೆದ ತರಬೇತಿ ನಿಮ್ಮ ಜೀವನದಲ್ಲಿ ನಿಮ್ಮ ಮೂಲಕ ಪ್ರತಿಫಲಿಸುವಂತಾಗಲಿ ಎಂದರು. ನೆಹರು ಯುವ ಕೇಂದ್ರದ ಸಂಯೋಜಕ ಸಾಂತಪ್ಪ ಕಲ್ಮಂಜ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾರ್ಥಿ ಲೀಲೇಶ್ ನಿರೂಪಿಸಿದರು. ಎನ್‌ವೈಕೆ ಸಂಯೋಜಕ ತೀಕ್ಷಿತ್ ದಿಡುಪೆ ವಂದನಾರ್ಪಣೆಗೈದರು. ತೀರ್ಥ ಮತ್ತು ಮಧುರಾಜ್ ಸಹಕಾರ ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.