PFI ದೆಹಲಿ ನಾಯಕರ ಬಂಧನವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ

ಬೆಳ್ತಂಗಡಿ : ವಿಶ್ವವೇ ಬೆರಗಾದ ದೆಹಲಿ ಗಲಭೆಗೆ ನೇರ ಹೊಣೆಯಾಗಿರುವ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸದೆ ಮುಸ್ಲಿಂ ಸಂಘಟನೆಗಳನ್ನು ಮತ್ತು ನಾಯಕರನ್ನು ಮಾತ್ರ ಗುರಿಯಾಗಿಸಿ ಕೇಸುದಾಖಲು ಮತ್ತು ಪಿಎಫ್‌ಐ ದೆಹಲಿ ರಾಜ್ಯ ನಾಯಕರನ್ನು ಬಂಧಿಸಿರುವ ಕ್ರಮ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧ ಎದುರುಗಡೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪಿಎಫ್‌ಐ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ಹೈದರ್ ನೀರ್ಸಾಲ್, ನಮ್ಮ ನಾಯಕರನ್ನು ಬಂಧನ ಮಾಡುವ ಮೂಲಕ ಪಿಎಫ್‌ಐ ಧಮನ ಮಾಡಬಹುದೆಂಬ ಕನಸು ಕಾಣಬೇಡಿ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಮುಸ್ತಫಾ ಜಿ ಕೆ, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷ ನವಾಜ್ ಕಟ್ಟೆ, ಪಿಎಫ್‌ಐ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಇಂಜಿನಿಯರ್ ಉಪಸ್ಥಿತರಿದ್ದರು. ಇಮ್ರಾನ್ ಪಾಂಡವರಕಲ್ಲು ಸ್ವಾಗತಿಸಿ ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.