ರುದ್ರಗಿರಿಯಲ್ಲಿ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ


ಬೆಳ್ತಂಗಡಿ: ತಣ್ಣೀರುಪಂತ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವದ ಧಾರ್ಮಿಕ ಸಭೆ ಮಾ.12 ಜರುಗಿತು.


ಧಾರ್ಮಿಕ ಸಭೆಯಲ್ಲಿ ಶ್ರೀಮದ್ ರಂಭಪುರಿ ಖಾಸಾ ಶಾಖ ಶ್ರೀಮನ್ ಮಹಾಸಂಸ್ಥಾನ ಮಳಲಿ ಮಠದ ಪರಮಪೂಜ್ಯ ಶ್ರೀ ಷ|| ಬ್ರ|| ಡಾ|| ಗುರುನಾಗಭೂಷಣ ಶಿವಾಚಾರ್‍ಯ ಮಹಾಸ್ವಾಮಿ ಅವರು ಆಶೀರ್ವಚನ ನೀಡಿದರು. ದಿವ್ಯ ಉಪಸ್ಥಿತಿಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ, ಅಧ್ಯಕ್ಷತೆಯನ್ನು ತಣ್ಣೀರು ಗ್ರಾ.ಪಂ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ವಹಿಸಿದ್ದರು. ಬಿ.ಸಿ.ರೋಡು ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರ ಸಂಚಯಗಿರಿ ಸಂಚಾಲಕ ಪ್ರೋ ತುಕಾರಂ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ, ರೈತಬಂಧು ಮಾಲಕ ಶಿವಶಂಕರ್ ನಾಯ್ಕ, ರಾಜ್ಯ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಪಿ.ಡಬ್ಲ್ಯು.ಡಿ ಕಂಟ್ರಾಕ್ಟರ್ ರಾಧಾಕೃಷ್ಣ ನಾಯಕ್, ಜಿ.ಪಂ ಸದಸ್ಯ ಪದ್ಮಶೇಖರ್ ಜೈನ್, ಗೆಜ್ಜೆಗಿರಿ ನಂದನಬಿತ್ತಿಲು ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕಕ್ಯಪದವು ಕೋಟಿ ಚೆನ್ನಯ್ಯ ಗರಡಿ ಕ್ಷೇತ್ರದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಾರ್ಯ ಗ್ರಾ.ಪಂ ಸದಸ್ಯೆ ಉಷಾ ಶರತ್ ಕುಮಾರ್, ಜೋತಿಷ್ಯ ಪ್ರಶಾಂತ್ ಭಟ್, ಕಂದಾಯ ನಿರೀಕ್ಷಕ ಪ್ರತೀಶ್, ಉಜಿರೆ ಮಂಜುಶ್ರೀ ಪ್ರಿಂಟರ್‍ಸ್ ಮೆನೇಜರ್ ಶೇಖರ್ ಟಿ, ಸಂಜೀವ ಶೆಟ್ಟಿ ಮುಡಾಯೂರು, ಭಜರಂಗದಳದ ಸಂಚಾಲಕ ಭಾಸ್ಕರ ಧರ್ಮಸ್ಥಳ, ಉದ್ಯಮಿ ಬಾಲಚಂದ್ರ ಶೆಟ್ಟಿ ಅಂತಂರ, ಕಲ್ಲೇರಿ ಸಿ.ಎ ಬ್ಯಾಂಕ್‌ನ ಸುರೇಂದ್ರ ಭಟ್ ಉಪಸ್ಥಿತರಿದ್ದರು.  ವಿವಿಧ ಭಜನಾ ಮಂಡಳಿಯಿಂದ ಭಜನಾ ಸೇವೆ, ತಾಂಬೂಲು ಕಲಾವಿದೆರ್ ತಂಡದಿಂದ ಅರ್ಗಂಟ್ ತುಳು ನಾಟಕ ಪ್ರದರ್ಶನಗೊಂಡಿತು.


ಮಾ.13 ರಂದು ಬೆಳಿಗ್ಗೆ 4 ರಿಂದ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ರುದ್ರಯಾಗ ಅಂಕುರ ಪೂಜೆ, ಇಂದ್ರಾದಿ ದೇವತೆಗಳ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ, 10.15ಕ್ಕೆ ವೃಷಭ ಲಗ್ನದಲ್ಲಿ ಶ್ರೀದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಜಲದ್ರೋಣಿ ಪೂಜೆ, ಕುಂಭೇಶ ಕರ್ಕರಿ ಬ್ರಹ್ಮಕಲಶ ಪೂಜೆ, ಹರಿಕಲಶ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5 ರಿಂದ ಅಧಿವಾಸ ಹೋಮ, ಕಲಶಾಧಿವಾಸ, ಅಧಿವಾಸ ಬಲಿ, ರಾತ್ರಿ ಪೂಜೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಧಾರ್ಮಿಕ ಸಭೆ, ಬೆಳಿಗ್ಗೆ 10 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.