ರಿಯಾಲಿಟಿ ಶೋಗೆ ಸಂಗೀತ ಭಟ್ ಆಯ್ಕೆ

ಉಜಿರೆ: ಬಾಯ್ ಝೋನ್ ಡಾನ್ಸ್ ಅಕಾಡೆಮಿ ಹಾಗೂ ಫಿಕ್ಸ್ ಆರ್ಟ್ ಎಂಟರ್ ಟೈನ್ಮೆಂಟ್ ಇದರ ಸಹಯೋಗದಲ್ಲಿ ನಡೆದ ಡಾನ್ಸ್ ಚಾಂಪಿಯನ್ ರಿಯಾಲಿಟಿ ಶೋಗೆ ಪುತ್ತೂರಿನ ಸಂಗೀತ ಭಟ್ ಇವರು ಆಯ್ಕೆಯಾಗಿದ್ದಾರೆ.
ಉಜಿರೆಯ ಹಿಪ್ ಬಾಯ್ಸ್ ಡಾನ್ಸ್ ಕ್ರೇವ್ ನ ಸಹನ್ ಎಂ.ಎಸ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ಡಾನ್ಸ್ ನಲ್ಲಿ ಸಾಧನೆ ಮಾಡುತ್ತಿರುವ ಸಂಗೀತ ಭಟ್ ಹಾಡು, ನಟನೆ, ಮಾಡೆಲಿಂಗ್ ಮುಂತಾದವುಗಳಲ್ಲಿ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆ, ಶಿವರತ್ನ ಹಾಗೂ ಇನ್ನು ಹಲವಾರು ಪ್ರಶಸ್ತಿಯನ್ನು ಗಳಿಸಿದ್ದಾರೆ. ಉಜಿರೆಯ ಎಸ್ ಡಿ.ಎಂ ಕಾಲೇಜಿನಲ್ಲಿ ಪ್ರಥಮ ಬಿಎ ಪದವಿಯಲ್ಲಿ ಓದುತ್ತಿರುವ ಈಕೆ ಪುತ್ತೂರಿನ ಚಂಡುಕುಡ್ಲುನ ಗುರುರಾಜ ಭಟ್ ಹಾಗೂ ಆಶಾಜ್ಯೋತಿ ದಂಪತಿಯ ಪುತ್ರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.